ಕರ್ನಾಟಕ

karnataka

ETV Bharat / state

ವಿಜಯಪುರದಲ್ಲಿ ತಮಿಳುನಾಡು ಮೂಲದ ಲಾರಿ ಚಾಲಕನ ಕೊಲೆ - vijaypur latest crime news

ತಮಿಳುನಾಡು ಮೂಲದ ಲಾರಿ ಚಾಲಕನೋರ್ವನನ್ನು ದುಷ್ಕರ್ಮಿಗಳು ಕೊಲೆ ಮಾಡಿರುವ ಘಟನೆ  ಜಿಲ್ಲೆಯ ನಿಡಗುಂದಿ ತಾಲೂಕಿನ ಗೊಳಸಂಗಿ  ರಾಷ್ಟ್ರೀಯ ಹೆದ್ದಾರಿ-50ರ ಬಳಿ ನಡೆದಿದೆ.

lorry driver killed in Vijayapura
ಕೊಲೆಯಾದ ಲಾರಿ ಚಾಲಕ

By

Published : Jan 18, 2020, 1:07 PM IST

ವಿಜಯಪುರ: ಲಾರಿ ಚಾಲಕನೋರ್ವನನ್ನು ದುಷ್ಕರ್ಮಿಗಳು ಕೊಲೆ ಮಾಡಿರುವ ಘಟನೆ ಜಿಲ್ಲೆಯ ನಿಡಗುಂದಿ ತಾಲೂಕಿನ ಗೊಳಸಂಗಿ ರಾಷ್ಟ್ರೀಯ ಹೆದ್ದಾರಿ-50ರ ಬಳಿ ನಡೆದಿದೆ.

ತಮಿಳುನಾಡು ಮೂಲದ ಲಾರಿ ಚಾಲಕನ ಕೊಲೆ: ಪೊಲೀಸರಿಂದ ಪರಿಶೀಲನೆ

ಕೊಲೆಯಾದ ಲಾರಿ ಚಾಲಕ ತಮಿಳುನಾಡಿನ ನಾಗಂಪುರ ಮೂಲದವ ಎಂದು ತಿಳಿದು ಬಂದಿದೆ. ಚಾಲಕನ ಎದೆ ಮತ್ತಿತರ ಭಾಗದಲ್ಲಿ ಬಡಿಗೆಯಿಂದ ಹೊಡೆದು ಕೊಲೆ ಮಾಡಲಾಗಿದ್ದು, ಬಳಿಕ ಮೃತದೇಹವನ್ನು ಅರೆಬೆತ್ತಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಕೊಲೆಯಾದ ಚಾಲಕ ಬೇರೆ ವಾಹನದ ಚಾಲಕನೊಂದಿಗೆ ಜಗಳ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದು, ಕೂಡಗಿ ಎನ್​​ಟಿಪಿಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details