ವಿಜಯಪುರ: ಪೇಜಾವರ ಶ್ರೀಗಳ ಸೇವೆ ಸ್ಮರಿಸಿ ಕಣ್ಣೀರಾದ ಸ್ವಾಮೀಜಿಗಳು. ಸೈದ್ಧಾಂತಿಕ ಭಿನ್ನಾಭಿಪ್ರಾಯವಿದ್ದರು ಸಂವಾದ ಮಾಡುವ ಗುಣ ಶ್ರೀಗಳದು. ದೀಘ್ರಕಾಲ ಉಡುಪಿ ಮಠದ ನೇತೃತ್ವ ವಹಿಸಿದ್ದರು ಎಂದು ಕೂಡಲ ಸಂಗಮದ ಪಂಚಮಸಾಲಿ ಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸಂತಾಪ ಸೂಚಿಸಿದರು.
ಅತಿ ಹೆಚ್ಚು ದಿನಗಳ ಕಾಲ ಒಂದು ಮಠದ ಪೀಠಾಧಿಪತಿಯಾದ 20ನೇ ಶತಮಾನದ ಪೇಜಾವರ ಶ್ರೀಗಳ ಅಗಲಿಕೆ ನಮಗೆ ಹಾಗೂ ಕರ್ನಾಟಕ ತುಂಬದ ನಷ್ಟ ಉಂಟುಮಾಡಿದೆ. ಎಲ್ಲ ಧರ್ಮಗಳ ಏಳಿಗೆಗೆ ಚಿಂತಿಸಿದವರು. ವಿಶ್ವೇಶ್ವರ ತೀರ್ಥ ಸ್ವಾಮೀಜಿ ಸಿದ್ಧಗಂಗಾ ಮಠದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು ಎಂದು ತುಮಕೂರು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಸ್ಮರಿಸಿದರು.
ಶೈಕ್ಷಣಿಕ ಕ್ಷೇತ್ರದಲ್ಲಿ ಶಿವಕುಮಾರ ಸ್ವಾಮೀಜಿಯವರ ಸೇವೆಯನ್ನು ಯಾರು ಕೂಡ ಮಾಡಲು ಸಾಧ್ಯವಿಲ್ಲ ಎಂಬ ಮಾತನ್ನು ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಸ್ಮರಿಸುತ್ತಿದ್ದರು. ಶಿವಕುಮಾರ ಸ್ವಾಮೀಜಿ ಹಾಗೂ ಮಠದ ಜೊತೆ ಭಾವನಾತ್ಮಕ ಸಂಬಂಧವಿತ್ತು ಎಂದು ಹೇಳಿದರು.