ಕರ್ನಾಟಕ

karnataka

ETV Bharat / state

ಜೀವಂತ ಇರುವ ಎಸ್ಎಸ್ಎಲ್​ಸಿ ವಿದ್ಯಾರ್ಥಿ ಫೋಟೋಗೆ ತಿಥಿ ಕಾರ್ಯ: ಕಿಡಿಗೇಡಿಗಳ ಕೃತ್ಯದಿಂದ ಕುಟುಂಬಕ್ಕೆ ಆತಂಕ

ವಿದ್ಯಾರ್ಥಿಯ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ, ಟೆಂಗಿನಕಾಯಿ ಒಡೆದು, ಗಡಿಗೆ ಇಟ್ಟು, ಹಾಲ್ ಟಿಕೆಟ್ ಝರಾಕ್ಸ್ ಪ್ರತಿ ಇಟ್ಟು ಕಿಡಿಗೇಡಿಗಳು ವಿಕೃತ ಮೆರೆದಿದ್ದಾರೆ.

ಎಸ್ಎಸ್ಎಲ್​ಸಿ ವಿದ್ಯಾರ್ಥಿಯ ಪೋಟೋಗೆ ತಿಥಿ ಕಾರ್ಯ
witchcraft on sslc-student

By

Published : Mar 28, 2022, 12:26 PM IST

ವಿಜಯಪುರ: ಎಸ್‌ಎಸ್ಎಲ್​ಸಿ ವಿದ್ಯಾರ್ಥಿಯೊಬ್ಬನ ಭಾವಚಿತ್ರಕ್ಕೆ ಕಿಡಿಗೇಡಿಗಳು ತಿಥಿ ಪೂಜೆ ಮಾಡಿ ಮಾಮಾಚಾರ ನಡೆಸಿರುವ ಘಟನೆ ವಿಜಯಪುರ ತಾಲೂಕಿನ ಅರಕೇರಿ ತಾಂಡಾ-1ರಲ್ಲಿ ನಡೆದಿದೆ. ತಾಂಡಾ ಬಳಿಯ ರಾಷ್ಟ್ರೀಯ ಹೆದ್ದಾರಿ 50ರ ಬದಿಯಲ್ಲಿ ಪರೀಕ್ಷಾರ್ಥಿ ಫೋಟೋ ಇಟ್ಟು ತಿಥಿಯ ಮಾದರಿಯಲ್ಲಿ ಪೂಜೆ ಮಾಡಲಾಗಿದೆ. ಇದರಿಂದ ವಿದ್ಯಾರ್ಥಿ ಮತ್ತು ಆತನ ಕುಟುಂಬದವರು ಆತಂಕಕ್ಕೆ ಒಳಗಾಗಿದ್ದಾರೆ.

ಜೀವಂತ ಇರುವ ಎಸ್ಎಸ್ಎಲ್​ಸಿ ವಿದ್ಯಾರ್ಥಿಯ ಪೋಟೋಗೆ ತಿಥಿ ಕಾರ್ಯ: ಕಿಡಿಗೇಡಿಗಳ ಕೃತ್ಯದಿಂದ ಕುಟುಂಬಕ್ಕೆ ಆತಂಕ

ರಾಜು ನಾಯಕ (ಹೆಸರು ಬದಲಾಯಿಸಲಾಗಿದೆ) ಎಂಬ ವಿದ್ಯಾರ್ಥಿಯ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿದ್ದಾರೆ. ಅಲ್ಲದೇ, ಟೆಂಗಿನಕಾಯಿ ಒಡೆದು, ಗಡಿಗೆ ಇಟ್ಟು, ಹಾಲ್ ಟಿಕೆಟ್ ಝರಾಕ್ಸ್ ಪ್ರತಿ ಇಟ್ಟು ವಿಕೃತ ಮೆರೆದಿದ್ದಾರೆ. ಘಟನೆಯಿಂದ ವಿದ್ಯಾರ್ಥಿ ಭಯಗೊಂಡಿದ್ದಾನೆ. ಪೋಷಕರು ಸಹ ಆತಂಕಗೊಂಡಿದ್ದು, ತಮ್ಮ ಮಗನ ಪೋಟೋ ಇಟ್ಟು ಈ ರೀತಿ ದುಷ್ಕೃತ್ಯವೆಸಗಿದವರ ಪತ್ತೆ ಮಾಡಬೇಕೆಂದು ಒತ್ತಾಯ ಮಾಡಿದ್ದಾರೆ.

ಸದ್ಯ ಘಟನೆಯ ಆತಂಕದಲ್ಲೇ ಪರೀಕ್ಷೆ ಬರೆಯಲು ವಿದ್ಯಾರ್ಥಿ ತೆರಳಿದ್ದಾನೆ. ಇತ್ತ, ಪೋಷಕರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲು ಚಿಂತನೆ ಮಾಡಿದ್ದಾರೆ.

ಇದನ್ನೂ ಓದಿ:ಎಸ್ಎಸ್ಎಲ್​ಸಿ ಪರೀಕ್ಷೆ ಆರಂಭ; ನಮಗೆ ಮಕ್ಕಳ ಭವಿಷ್ಯವೇ ಮುಖ್ಯ ಎಂದ ತಾಯಿ!

ABOUT THE AUTHOR

...view details