ಕರ್ನಾಟಕ

karnataka

ETV Bharat / state

ಲಾಕ್​ಡೌನ್ ಎಫೆಕ್ಟ್: ಬೆಂಗಳೂರಿನಿಂದ ಬಂದವರು ಮನೆಗೆ ತೆರಳಲು ವಾಹನಗಳಿಲ್ಲದೇ ಪರದಾಟ - ವಾಹನಗಳಿಲ್ಲದೇ ಪರದಾಟ

ಮುದ್ದೇಬಿಹಾಳ ನಗರದಿಂದ ಗ್ರಾಮೀಣ ಪ್ರದೇಶಗಳಿಗೆ ತೆರಳಲು ಬೆಂಗಳೂರಿನಿಂದ ಬಂದ ಜನರಿಗೆ ಯಾವುದೇ ವಾಹನಗಳಿಲ್ಲದೇ ಪರದಾಡಿದರು.

Sunday Lockdown
ಸಂಡೇ ಲಾಕ್ ಡೌನ್ ಎಫೆಕ್ಟ್: ಬೆಂಗಳೂರಿನಿಂದ ಬಂದವರಿಗೆ ವಾಹನಗಳಿಲ್ಲದೇ ಪರದಾಟ

By

Published : Jul 5, 2020, 9:34 AM IST

ಮುದ್ದೇಬಿಹಾಳ:ಕೊರೊನಾ ಸೋಂಕು ತಡೆಗೆ ರಾಜ್ಯ ಸರ್ಕಾರ ಭಾನುವಾರದ ಲಾಕ್​ಡೌನ್ ಜಾರಿಗೊಳಿಸಿರುವ ಬೆನ್ನಲ್ಲೇ, ಬೆಂಗಳೂರಿನಿಂದ ಮತ್ತೆ ಕಾರ್ಮಿಕರ ವಲಸೆ ಗ್ರಾಮೀಣ ಪ್ರದೇಶಗಳಲ್ಲಿ ಆರಂಭಗೊಂಡಿದೆ.

ಸಂಡೇ ಲಾಕ್ ಡೌನ್ ಎಫೆಕ್ಟ್: ಬೆಂಗಳೂರಿನಿಂದ ಬಂದವರಿಗೆ ವಾಹನಗಳಿಲ್ಲದೇ ಪರದಾಟ

ಮುದ್ದೇಬಿಹಾಳ ನಗರದಿಂದ ಗ್ರಾಮೀಣ ಪ್ರದೇಶಗಳಿಗೆ ತೆರಳಲು ಬೆಂಗಳೂರಿನಿಂದ ಬಂದ ಜನರು ಯಾವುದೇ ವಾಹನಗಳಿಲ್ಲದೇ ಪರದಾಡಿದರು. ತಾಲೂಕಿನ ಟಕ್ಕಳಕಿ, ರೂಢಗಿ, ಕೋಳೂರ ಗ್ರಾಮಗಳಿಗೆ ತೆರಳುವ ಜನರಿಗೆ ಹಳ್ಳಿಗಳಿಗೆ ಊರು ತಲುಪಲು ವಾಹನಗಳಿಲ್ಲದೇ ಪರದಾಟ ನಡೆಸಿದರು.

ಕೆಲವರು ಸ್ನೇಹಿತರಿಗೆ ಕರೆ ಮಾಡಿ ಬೈಕ್ ತರಿಸಿಕೊಂಡು ಊರು ತಲುಪಿದರೆ, ಇನ್ನು ಕೆಲವರು ಖಾಸಗಿ ಕಾರುಗಳನ್ನು ದುಪ್ಪಟ್ಟು ಬಾಡಿಗೆ ಕೊಟ್ಟು ಊರು ತಲುಪಿದರು. ಸಣ್ಣಪುಟ್ಟ ಮಕ್ಕಳನ್ನು ಕರೆದುಕೊಂಡು ಇನ್ನುಮುಂದೆ ಬೆಂಗಳೂರು ಕಡೆಗೆ ಮುಖ ಮಾಡುವುದಿಲ್ಲ ಎಂದು ವಾಪಸ್ಸಾಗುತ್ತಿದ್ದ ಕುಟುಂಬಗಳೇ ಹೆಚ್ಚಾಗಿ ಕಂಡು ಬಂದವು.

ABOUT THE AUTHOR

...view details