ಕರ್ನಾಟಕ

karnataka

ETV Bharat / state

ವಿಜಯಪುರದ ಜಿ.ಪಂ. ನೂತನ ಅಧ್ಯಕ್ಷರಾಗಿ ಸುಜಾತಾ ಕಳ್ಳಿಮನಿ ಆಯ್ಕೆ..! - vijayapur ZP

ವಿಜಯಪುರದ ಜಿಲ್ಲಾ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಸಾರವಾಡ ಮತಕ್ಷೇತ್ರ ಸದಸ್ಯೆ ಸುಜಾತಾ ಸೋಮನಾಥ ಕಳ್ಳಿಮನಿ ಆಯ್ಕೆಯಾಗಿದ್ದಾರೆ.

vijayapur ZP
ವಿಜಯಪುರದ ಜಿ.ಪಂ. ನೂತನ ಅಧ್ಯಕ್ಷರಾಗಿ ಸುಜಾತಾ ಕಳ್ಳಿಮನಿ ಆಯ್ಕೆ

By

Published : Jun 30, 2020, 5:21 PM IST

ವಿಜಯಪುರ:ಜಿಲ್ಲಾ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಸಾರವಾಡ ಮತಕ್ಷೇತ್ರ ಸದಸ್ಯೆ ಸುಜಾತಾ ಸೋಮನಾಥ ಕಳ್ಳಿಮನಿ ಆಯ್ಕೆಯಾಗಿದ್ದಾರೆ. ಈ ಮೂಲಕ ಆಡಳಿತಾರೂಢ ಬಿಜೆಪಿಗೆ ಭಾರಿ ಮುಖಭಂಗವಾಗಿದೆ.

42 ಸದಸ್ಯರ ಬಲವಿರುವ ವಿಜಯಪುರ ಜಿಲ್ಲಾ ಪಂಚಾಯಿತಿಯಲ್ಲಿ, ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಸದಸ್ಯೆ ಸುಜಾತಾ ಕಳ್ಳಿಮನಿ ಹಾಗೂ ಬಿಜೆಪಿಯ ಭೀಮಾಶಂಕರ ಬಿರಾದಾರ ನಾಮಪತ್ರ ಸಲ್ಲಿಸಿದ್ದರು.

ವಿಜಯಪುರದ ಜಿ.ಪಂ. ನೂತನ ಅಧ್ಯಕ್ಷರಾಗಿ ಸುಜಾತಾ ಕಳ್ಳಿಮನಿ ಆಯ್ಕೆ

ಬಿಜೆಪಿಯ ನಾಲ್ವರು ಜಿ.ಪಂ ಸದಸ್ಯರು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಸೂಚಿಸಿದ ಕಾರಣ, ಕಾಂಗ್ರೆಸ್ ಸದಸ್ಯೆಗೆ 22 ಮತಗಳು ದೊರೆಯುವ ಮೂಲಕ ಆಯ್ಕೆಯಾದರು. ಬಿಜೆಪಿ ಅಭ್ಯರ್ಥಿ ಭೀಮಾಶಂಕರ ಬಿರಾದಾರ ಅವರಿಗೆ 20 ಮತ ತೆಗೆದುಕೊಳ್ಳಲು ಸಾಧ್ಯವಾಯಿತು.

ಇನ್ನು ಕಾಂಗ್ರೆಸ್‌ನ ಮೂವರು ಸದಸ್ಯರು ಬಿಜೆಪಿ ಪರವಾಗಿ ಮತ ಚಲಾವಣೆ ಮಾಡಿದ್ದು, ಆದರೆ ಕಾಂಗ್ರೆಸ್​ಗೆ ಜೆಡಿಎಸ್ ಮೂವರು ಸದಸ್ಯರು ಬೆಂಬಲ ನೀಡಿದರು. ಈ ಹಿನ್ನೆಲೆ ಅಭ್ಯರ್ಥಿ ಸುಲಭವಾಗಿ ಜಯಗಳಿಸಿದರು.

ABOUT THE AUTHOR

...view details