ವಿಜಯಪುರ :ಜಿಲ್ಲೆಯಲ್ಲಿ ಎರಡನೇ ಹಂತದ ಗ್ರಾಮ ಪಂಚಾಯತ್ ಚುನಾವಣೆಗೆ ಅಭ್ಯರ್ಥಿಗಳಿಂದ ಡಿ. 11 ರಿಂದ 16ರವರೆಗೆ ವಿವಿಧ ಗ್ರಾಮ ಪಂಚಾಯತ್‌ಗಳಲ್ಲಿ ಒಟ್ಟು 6,165 ನಾಮಪತ್ರ ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಗುರುವಾರ ತಿಳಿಸಿದ್ದಾರೆ.
ವಿಜಯಪುರ : ಎರಡನೇ ಹಂತದ ಚುನಾವಣೆಗೆ 6165 ನಾಮಪತ್ರ ಸಲ್ಲಿಕೆ - DC Sunil kumar
ಜಿಲ್ಲೆಯಲ್ಲಿ ಎರಡನೇ ಹಂತದ ಚುನಾವಣೆಗೆ ಒಟ್ಟು 6,165 ನಾಮಪತ್ರ ಸಲ್ಲಿಕೆಯಾಗಿರುವುದಾಗಿ ಡಿಸಿ ಪಿ ಸುನೀಲ್ ಕುಮಾರ್ ತಿಳಿಸಿದ್ದಾರೆ..
ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್
ಓದಿ...ಅತ್ತೆ-ಸೊಸೆ ಸ್ಪರ್ಧೆಯಿಂದ ರಂಗೇರಿತು ಕೊಡಗಾನೂರ ಗ್ರಾಮ ಪಂಚಾಯಿತಿ ಚುನಾವಣೆ!
ಇಂಡಿ ತಾಲೂಕಿನ ಗ್ರಾಮ ಪಂಚಾಯತ್‌ಗಳಿಗೆ ಒಟ್ಟು 2,489, ಚಡಚಣ ತಾಲೂಕಿನ ಗ್ರಾಮ ಪಂಚಾಯತ್‌ಗಳಿಗೆ 1047, ಸಿಂದಗಿ ತಾಲೂಕಿನ ಗ್ರಾಮ ಪಂಚಾಯತ್‌ಗಳಿಗೆ 1,646, ದೇವರ ಹಿಪ್ಪರಗಿ ತಾಲೂಕಿನ ಗ್ರಾಮ ಪಂಚಾಯತ್‌ಗಳಿಗೆ 983 ಸೇರಿ ಒಟ್ಟು 6,165 ನಾಮಪತ್ರ ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.