ವಿಜಯಪುರ: ಉಡುಪಿ ಹಿಜಾಬ್ ವಿವಾದ ವಿಜಯಪುರಕ್ಕೂ ತಲುಪಿದೆ. ಹಿಜಾಬ್ ವಿರೋಧಿಸಿ ಚಡಚಣ ಪಟ್ಟಣದ ಶ್ರೀ ಸಂಗಮೇಶ್ವರ ಪದವಿ ಕಾಲೇಜಿನ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿಕೊಂಡು ಬಂದಿದ್ದಾರೆ.
ಕೇಸರಿ ಶಾಲು ಸಹಿತ ಆಗಮಿಸಿದ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಲು ಮುಂದಾಗಿದ್ದರು. ಈ ವೇಳೆ, ಕಾಲೇಜು ಆಡಳಿತ ಮಂಡಳಿ ಗೇಟ್ ಬಂದ್ ಮಾಡಿದೆ. ಕಾಲೇಜು ಆಡಳಿತ ಮಂಡಳಿಯ ನಿರ್ಧಾರಕ್ಕೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.