ಕರ್ನಾಟಕ

karnataka

ETV Bharat / state

ಮುದ್ದೇಬಿಹಾಳ : ಕಾಲುವೆಯಲ್ಲಿ ಮುಳುಗಿದ್ದ ವಿದ್ಯಾರ್ಥಿ ಶವ ಪತ್ತೆ - Student drowns in Gangoli

ಗೆಳೆಯರೊಂದಿಗೆ ಈಜಲು ಹೋಗಿ ನೀರುಪಾಲಾಗಿದ್ದ ವಿದ್ಯಾರ್ಥಿಯ ಶವ ಇಂದು ಪತ್ತೆಯಾಗಿದೆ. ನೀರು ಪಾಲಾದ ಬಾಲಕನನ್ನು ದ್ವಿತೀಯ ಪಿಯುಸಿ ವಿದ್ಯಾರ್ಥಿ ಮದನ ಹಣಮಂತ ಗೋಡಿಹಾಳ ಎಂದು ಗುರುತಿಸಲಾಗಿದೆ. ಅಗ್ನಿ ಶಾಮಕ ದಳದ ಕಾರ್ಯಾಚರಣೆಯಿಂದ ವಿದ್ಯಾರ್ಥಿಯ ಶವವನ್ನು ಮೇಲೆತ್ತಲಾಗಿದೆ..

student-drowns-in-gangoli-dead-body-found
ಮುದ್ದೇಬಿಹಾಳ : ಕಾಲುವೆಯಲ್ಲಿ ಮುಳುಗಿದ್ದ ವಿದ್ಯಾರ್ಥಿ ಶವ ಪತ್ತೆ

By

Published : Apr 5, 2022, 11:59 AM IST

ಮುದ್ದೇಬಿಹಾಳ : ಪಟ್ಟಣದ ಹಡಲಗೇರಿ ರಸ್ತೆಯಲ್ಲಿರುವ ಚಿಮ್ಮಲಗಿ ಮುಖ್ಯ ಕಾಲುವೆಯಲ್ಲಿ ಸಹಪಾಠಿಗಳೊಂದಿಗೆ ಈಜಾಡಲು ತೆರಳಿದ್ದ ವಿದ್ಯಾರ್ಥಿ ನೀರು ಪಾಲಾಗಿದ್ದು, ಇಂದು ವಿದ್ಯಾರ್ಥಿಯ ಶವ ಪತ್ತೆಯಾಗಿದೆ. ತಾಳಿಕೋಟೆ ತಾಲೂಕಿನ ಬಿ.ಸಾಲವಾಡಗಿಯ ದ್ವಿತೀಯ ಪಿಯುಸಿ ವಿದ್ಯಾರ್ಥಿ ಮದನ ಹಣಮಂತ ಗೋಡಿಹಾಳ ನೀರುಪಾಲಾದ ವಿದ್ಯಾರ್ಥಿ ಎಂದು ತಿಳಿದು ಬಂದಿದೆ.

ನಿನ್ನೆ ವಿದ್ಯಾರ್ಥಿ ಸ್ನೇಹಿತರೊಂದಿಗೆ ಈಜಲು ತೆರಳಿದ್ದ ವೇಳೆ ನೀರು ಪಾಲಾಗಿದ್ದ. ನೀರುಪಾಲಾದ 100 ಮೀಟರ್ ಅಂತರದಲ್ಲಿ ವಿದ್ಯಾರ್ಥಿಯ ಶವ ಪತ್ತೆಯಾಗಿದೆ. ಅಗ್ನಿಶಾಮಕ ಠಾಣೆಯ ಅಧಿಕಾರಿ ಪ್ರಮೋದ ಬಿ.ಎಸ್ ಹಾಗೂ ಪಿಎಸೈ ರೇಣುಕಾ ಜಕನೂರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಶವವನ್ನು ಮೇಲೆತ್ತಲಾಗಿದೆ. ಸದ್ಯ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ :ಕಾಡು ಪ್ರಾಣಿಗಳ ಮಾಂಸ ಮಾರಾಟ ಯತ್ನ: ಐವರು ಆರೋಪಿಗಳು ಸೆರೆ

ABOUT THE AUTHOR

...view details