ವಿಜಯಪುರ:ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಇಕ್ರಾ ಬಾಲಕಿಯರ ಪಿಯು ವಿಜ್ಞಾನ ಕಾಲೇಜಿನ ಸಹಯೋಗದಲ್ಲಿ ರಾಜ್ಯ ಮಟ್ಟದ 19 ವರ್ಷದೊಳಗಿನ ಪದವಿ ಪೂರ್ವ ವಿದ್ಯಾರ್ಥಿಗಳ ರಾಜ್ಯಮಟ್ಟದ ಸೈಕ್ಲಿಂಗ್ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿತ್ತು.
ವಿಜಯಪುರದಲ್ಲಿ ರಾಜ್ಯ ಮಟ್ಟದ ಪದವಿ ಪೂರ್ವ ಸೈಕ್ಲಿಂಗ್ ಕ್ರೀಡಾಕೂಟ.. ಈ ಸೈಕ್ಲಿಂಗ್ ಕ್ರೀಡಾಕೂಟದಲ್ಲಿ ಸೈಕ್ಲಿಂಗ್ ಮಾಡಲು ಬೆಳಗಾವಿ, ಬಾಗಲಕೋಟ, ಗದಗ, ಮೈಸೂರು ಸೇರಿ 7 ಜಿಲ್ಲೆಗಳ 65ಕ್ಕೂ ಅಧಿಕ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸೈಕ್ಲಿಂಗ್ ಮಾಡಲು ಆಗಮಿಸಿದರು. ವಿದ್ಯಾರ್ಥಿಗಳಿಗಾಗಿ 25-30 ಕಿ.ಮೀ ಟೈಮ್ ಟ್ರಯರ್ಸ್, 15-20 ಕಿ.ಮೀ ಟ್ರಯರ್ಸ್ ಹಾಗೂ 20-25 ಕಿ.ಮೀ ಮಾಸ್ ಸ್ಪಾರ್ಟ್ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಇಂದು ಸಂಜೆವರಿಗೂ ನಗರದ ಎಎಸ್‌ಪಿ ಕಾಮರ್ಸ್ ಕಾಲೇಜು ಮೈದಾನದಲ್ಲಿ 1 ಕಿ.ಮೀ ಟ್ರೈಮ್ ಟ್ರೈಲ್, 3 ಕಿ.ಮೀ ಟ್ರ್ಯಾಕ್ ಇವೆಂಟ್ ವೈಯಕ್ತಿಕ ಪರ್ಶೂಟ್ ಹಾಗೂ ಟ್ರ್ಯಾಕ್ ಇವೆಂಟ್ ಟೀಂ ಪರ್ಶೂಟ್ ಸ್ಪರ್ಧೆಗಳು ನಡೆಯುತ್ತಿದೆ. ವಿವಿಧ ಸೈಕ್ಲಿಂಗ್ ಸ್ಪರ್ಧೆಯಲ್ಲಿ ವಿಜೇತರಾದ ಇಬ್ಬರು ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಲಿದ್ದಾರೆ. ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ ವಿದ್ಯಾರ್ಥಿಗಳಿಗೆ ಬಹುಮಾನ, ಪ್ರಮಾಣ ಪತ್ರ ಹಾಗೂ ಪಾರಿತೋಷಕವನ್ನ ಪದವಿ ಪೂರ್ವ ಇಲಾಖೆ ನೀಡುತ್ತಿದೆ.
ಕರ್ನಾಟಕ ಪದವಿ ಪೂರ್ವ ಶಿಲ್ಷಣ ಇಲಾಖೆಯಿಂದ ಇಬ್ಬರು ಆಬ್ಜರ್ವರ್ ಕೂಡ ವಿದ್ಯಾರ್ಥಿಗಳ ಸೈಕ್ಲಿಂಗ್ ಸ್ಪರ್ಧೆ ನೋಡಲು ಆಗಮಿಸಿದ್ದಾರೆ. ಸೈಕ್ಲಿಂಗ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಬಂದ ವಿದ್ಯಾರ್ಥಿಗಳಿಗೆ ವಿಜಯಪುರ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಊಟ-ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಡಿಡಿಪಿಯು ಜೆ ಎಸ್ ಪೂಜಾರಿ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ರು.