ನವೆಂಬರ್ 20 ರಂದು ರಾಜ್ಯ ಮಟ್ಟದ ಸಹಕಾರ ಸಪ್ತಾಹ ಸಮಾರೋಪ ಸಮಾರಂಭ - ವಿಜಯಪುರ ನ್ಯೂಸ್
ರಾಜ್ಯ ಸಹಕಾರಿ ಸಚಿವರ ನಿರ್ದೇಶನದನ್ವಯ ನ. 20ರಂದು ನಗರದ ರಾಣಿ ಚನ್ನಮ್ಮ ಸಮುದಾಯ ಭವನದಲ್ಲಿ ರಾಜ್ಯ ಮಟ್ಟದ ಸಪ್ತಾಹ ಸಮಾರೋಪ ಸಮಾರಂಭವನ್ನು ಸರಳವಾಗಿ ಆಚರಿಸಲಾಗುತ್ತಿದೆ ಎಂದು ವಿಜಯಪುರ ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವಾನಂದ ಪಾಟೀಲ ತಿಳಿಸಿದ್ದಾರೆ.
ನವೆಂಬರ್ 20 ರಂದು ರಾಜ್ಯ ಮಟ್ಟದ ಸಹಕಾರ ಸಪ್ತಾಹ ಸಮಾರೋಪ ಸಮಾರಂಭ
ವಿಜಯಪುರ:ನವೆಂಬರ್ 20ರಂದು ರಾಜ್ಯದ ಮಟ್ಟದ ಸಹಕಾರ ಸಪ್ತಾಹ ಸಮಾರೋಪ ಸಮಾರಂಭ ನಡೆಸಲಾಗುವುದು ಎಂದು ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವಾನಂದ ಪಾಟೀಲ ತಿಳಿಸಿದರು.
ಇನ್ನು, ಡಿಸಿಸಿ ಬ್ಯಾಂಕ್ ವಾರ್ಷಿಕ ಮಹಾಸಭೆ ನಡೆಸಲು ಡಿಸೆಂಬರ್‌ವರೆಗೂ ಅವಕಾಶವಿದ್ದರೂ ಕಾರ್ಯಕ್ರಮದ ದಿನದಂದೇ ಸಭೆ ನಡೆಸಲು ಚಿಂತನೆ ನಡೆಸಲಾಗಿದೆ. ಅಲ್ಲದೆ, ಈ ವರ್ಷ ಡಿಸಿಸಿ ಬ್ಯಾಂಕ್‌ಗೆ ನಿರೀಕ್ಷತ ಪ್ರಮಾಣದಲ್ಲಿ ಲಾಭಾಂಶ ಗಳಿಗೆಯಾಗಿಲ್ಲ. ಪ್ರವಾಹ ಹಾಗೂ ಕೋವಿಡ್ ಸಂದರ್ಭದ ಕಾರಣ ರೈತರು ಹೆಚ್ಚಾಗಿ ಸಾಲ ಮರುಪಾವತಿ ಮಾಡಿಲ್ಲ. ಈ ವರ್ಷವೂ 10.69 ಕೋಟಿ ಲಾಭ ಬಂದಿದೆ. ಇದಲ್ಲದೆ ನೆರೆಹಾವಳಿ ಪರಿಹಾರ ನಿಧಿಗೆ 50 ಲಕ್ಷ, ಸಿಎಂ ಕೋವಿಡ್-19 ಪರಿಹಾರ ನಿಧಿಗೆ 1 ಕೋಟಿ ಹಾಗೂ 500 ಆಶಾ ಕಾರ್ಯಕರ್ತೆಯರಿಗೆ 15 ಲಕ್ಷ ರೂ. ಡಿಸಿಸಿ ಬ್ಯಾಂಕ್‌ನಿಂದ ವಿತರಣೆ ಮಾಡಲಾಗಿದೆ ಎಂದರು.
ಸರ್ಕಾರ ಸಹಕಾರಿ ಬ್ಯಾಂಕ್‌ಗೆ ನೀಡುವ ಬಡ್ಡಿದರದಲ್ಲಿ 7.45 ರೂಪಾಯಿಂದ 7.10 ರೂ. ಇಳಿಕೆ ಮಾಡಿದ ಪರಿಣಾಮ ಇಂದು ಬ್ಯಾಂಕ್ ಹೆಚ್ಚಿನ ಲಾಭ ಪಡೆಯಲಾಗಲಿಲ್ಲ. ಇದುವರೆಗೂ ಕೂಡ ಸಹಕಾರಿ ಬ್ಯಾಂಕ್‌ನಿಂದ ಪ್ರತಿ ರೈತರಿಗೆ ಜಮೀನು ಆಧಾರಿತವಾಗಿ 55 ಸಾವಿರ ರೂ. ಅಲ್ಪಾವಧಿ ಸಾಲ ವಿತರಣೆ ಮಾಡಲಾಗುತ್ತಿದೆ. ಸರ್ಕಾರ ರೈತರ ಬಡ್ಡಿ ಮನ್ನಾ ಮಾಡಲು ಆದೇಶಿಸಿದಾಗ ಜಿಲ್ಲೆಯ 1,036 ರೈತರಿಗೆ ಇದರ ಲಾಭವಾಗಿದ್ದು, 7.36 ಕೋಟಿ ಬಡ್ಡಿ ಹಣ ಮನ್ನಾ ಮಾಡಲಾಗಿದೆ ಎಂದರು. ಕೊರೊನಾ ಭೀತಿಯಿಂದ ಡಿಸಿಸಿ ಬ್ಯಾಂಕ್‌ನ ಶತಮಾನೋತ್ಸವ ಕಾರ್ಯಕ್ರಮ ಮುಂದೂಡಲಾಗಿದೆ. ಈಗಾಗಲೇ ಶತಮಾನೋತ್ಸವ ಕಟ್ಟಡ ಕೂಡ ಮುಗಿಯುವ ಹಂತದಲ್ಲಿದ್ದು, ಕೊರೊನಾ ವೈರಸ್ ಕಾರಣದಿಂದ ಕಾರ್ಯಕ್ರಮ ಮಾಡಲಾಗುತ್ತಿಲ್ಲ ಎಂದರು.