ಕರ್ನಾಟಕ

karnataka

ETV Bharat / state

ವಿಜಯಪುರದಲ್ಲಿ ರೌಡಿಗಳ ಪರೇಡ್​​.. ಬಡ್ಡಿ ದಂಧೆಯಲ್ಲಿ ತೊಡಗಿದ್ದವನಿಗೆ ಎಸ್​ಪಿಯಿಂದ ಕಪಾಳ ಮೋಕ್ಷ - ವಿಜಯಪುರ ಕಪಾಳ ಮೋಕ್ಷ ಸುದ್ಧಿ

ಭೀಮಶಿ ಭಜಂತ್ರಿ ಎಂಬ ರೌಡಿಗೆ ಆತ ಮಾಡುತ್ತಿದ್ದ ಬಡ್ಡಿ ದಂಧೆ ಕುರಿತು ಕ್ಲಾಸ್ ತೆಗದುಕೊಂಡ ವಿಜಯಪುರ ಎಸ್​​ಪಿ ಅನುಪಮ್ ಅಗರವಾಲ್ ಆತನಿಗೆ ಕಪಾಳ ಮೋಕ್ಷ ಮಾಡಿ, ಖಡಕ್​ ಎಚ್ಚರಿಕೆ ನೀಡಿದ್ದಾರೆ.

ಕಪಾಳ ಮೋಕ್ಷ
ಕಪಾಳ ಮೋಕ್ಷ

By

Published : Nov 20, 2020, 11:08 AM IST

Updated : Nov 20, 2020, 12:21 PM IST

ವಿಜಯಪುರ: ಅಕ್ರಮವಾಗಿ ಬಡ್ಡಿ ದಂಧೆಯಲ್ಲಿ ಹಾಗೂ ತಹಶೀಲ್ದಾರ್​ ಕಾರು ಚಾಲಕನ ಹತ್ಯೆಯಲ್ಲಿ ಭಾಗಿಯಾಗಿದ್ದ ರೌಡಿಗೆ ಎಸ್​​ಪಿ ಅನುಪಮ್ ಅಗರವಾಲ್ ಕಪಾಳಕ್ಕೆ ಬಾರಿಸಿ ಭರ್ಜರಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ನಗರ ಕವಾಯತ್ ಮೈದಾನದಲ್ಲಿ ರೌಡಿಗಳ ಪರೇಡ್ ನಡೆಸಿದ ಎಸ್​​ಪಿ ಅನುಪಮ್ ಅಗರವಾಲ್, ಭೀಮಶಿ ಭಜಂತ್ರಿ ಎಂಬ ರೌಡಿಗೆ ಆತ ಮಾಡುತ್ತಿದ್ದ ಬಡ್ಡಿ ದಂಧೆ ಕುರಿತು ವಿಚಾರಣೆ ನಡೆಸಿದರು. ಈ ವೇಳೆ ಆರೋಪಿ ವಿರುದ್ಧ ಸಿಟ್ಟಿಗೆದ್ದ ಎಸ್​​ಪಿ ಆತನಿಗೆ ಕಪಾಳ ಮೋಕ್ಷ ಮಾಡಿದರು.

ಬಡ್ಡಿ ದಂಧೆಯಲ್ಲಿ ತೊಡಗಿದ್ದವನಿಗೆ ಎಸ್​ಪಿ ಕಪಾಳ ಮೋಕ್ಷ

ಅಷ್ಟೇ ಅಲ್ಲದೇ ಜಿಲ್ಲೆಯಲ್ಲಿ ಲೈಸನ್ಸ್​ ಇಲ್ಲದೇ ಬಡ್ಡಿ ವ್ಯವಹಾರಲ್ಲಿ ಭಾಗಿಯಾಗಿರುವ ರೌಡಿಗಳಿಗೆ ದಂಧೆ ಕೈಬಿಡುವಂತೆ ಎಸ್​ಪಿ ಅನುಪಮ್ ಅಗರವಾಲ್ ಖಡಕ್​​ ವಾರ್ನಿಂಗ್​ ನೀಡಿದ್ದಾರೆ.

ರೌಡಿಗಳ ಚಲನವಲನಗಳ ಮೇಲೆ ನಿಗಾ:

ರೌಡಿಗಳಿಗೆ ಎಸ್​ಪಿ ಅನುಪಮ್​ ಅಗರವಾಲ್ ಮಾತಿನ ಬಿಸಿ ಮುಟ್ಟಿಸಿದರು. ಬಳಿಕೆ ರೌಡಿಗಳು ಭಾಗಿಯಾಗಿರುವ ಪ್ರಕರಣಗಳ ಮಾಹಿತಿ ಪೆಡೆದುಕೊಂಡರು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಬದುಕಿ ನಿಮ್ಮ ಮೇಲೆ‌ ಸದಾ ಪೊಲೀಸ್ ನಿಗಾ ಇರುತ್ತದೆ ಎಂದು ಎಚ್ಚರಿಸಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂದಿನ ಪರೇಡ್‌ನಲ್ಲಿ 113 ಜನ ರೌಡಿಗಳು ಭಾಗಿಯಾಗಿದ್ದಾರೆ. ಕಳೆದ 20 ದಿನಗಳಲ್ಲಿ 2 ಶೂಟ್​ ಔಟ್​ ಪ್ರಕರಣಗಳು ನಡೆದಿವೆ. ಇವುಗಳಲ್ಲಿ ಯುವಕರಿಗೆ ಪ್ರಚೋದನೆ ಮಾಡಿ ಕೃತ್ಯ ನಡೆಸಲಾಗುತ್ತಿದೆ. ಅಲ್ಲದೆ ಆಕ್ರಮ ಶಸ್ತ್ರಾಸ್ತ್ರಗಳ ಬಳಕೆ ಮಾಡಲಾಗಿದೆ. ಅವಗಳ ಮೇಲೆ ನಿಗಾವಹಿಸಿ ಕೃತ್ಯಗಳ ತಡೆಗೆ ಪರೇಡ್ ಮಾಡಲಾಗಿದೆ ಎಂದರು.

Last Updated : Nov 20, 2020, 12:21 PM IST

ABOUT THE AUTHOR

...view details