ವಿಜಯಪುರ: ಭೀಮಾ ತೀರದ ನಟೋರಿಯಸ್ ಮಹಾದೇವ ಸಾಹುಕಾರ ಭೈರಗೊಂಡ ಮೇಲಿನ ಗುಂಡಿನ ದಾಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹೆದ್ದಾರಿಯ ಕನ್ನಾಳ ಕ್ರಾಸ್ ಬಳಿ ದಾಳಿ ನಡೆದ ಸ್ಥಳಕ್ಕೆ ಎಸ್ಪಿ ಅನುಪಮ್ ಅಗರವಾಲ್ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.
ವಿಜಯಪುರ ಶೂಟೌಟ್ ಪ್ರಕರಣ: ಸ್ಥಳ ಪರಿಶೀಲನೆ ನಡೆಸಿದ ಎಸ್ಪಿ ಅನುಪಮ್ ಅಗರವಾಲ್ - ವಿಜಯಪುರ ಶೂಟೌಟ್ ಪ್ರಕರಣ
ಭೀಮಾತೀರದ ಮಹಾದೇವ ಸಾಹುಕಾರ್ ಮೇಲಿನ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳ ತಂಡ ಸಹ ಎಸ್ಪಿ ಜೊತೆಗೆ ಪರಿಶೀಲನೆ ನಡೆಸಿದರು. ಸ್ಥಳದಲ್ಲಿದ್ದ ವಾಹನಗಳು, ಸಮೀಪದಲ್ಲಿಯೇ ಬಿದ್ದ ಬೈಕ್ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಪರಿಶೀಲನೆ ನಡೆಸಿದರು.
![ವಿಜಯಪುರ ಶೂಟೌಟ್ ಪ್ರಕರಣ: ಸ್ಥಳ ಪರಿಶೀಲನೆ ನಡೆಸಿದ ಎಸ್ಪಿ ಅನುಪಮ್ ಅಗರವಾಲ್ SP Anupam Agarwal inspected the location of the shootout Case](https://etvbharatimages.akamaized.net/etvbharat/prod-images/768-512-9411516-288-9411516-1604381498209.jpg)
ಸ್ಥಳ ಪರಿಶೀಲನೆ ನಡೆಸಿದ ಎಸ್ಪಿ ಅನುಪಮ್ ಅಗರವಾಲ್
ಸ್ಥಳ ಪರಿಶೀಲನೆ ನಡೆಸಿದ ಎಸ್ಪಿ ಅನುಪಮ್ ಅಗರವಾಲ್
ಹಿರಿಯ ಅಧಿಕಾರಿಗಳ ತಂಡ ಸಹ ಎಸ್ಪಿ ಜೊತೆಗೆ ಪರಿಶೀಲನೆ ನಡೆಸಿದರು. ಸ್ಥಳದಲ್ಲಿ ಇದ್ದ ವಾಹನಗಳು, ಸಮೀಪದಲ್ಲಿಯೇ ಬಿದ್ದ ಬೈಕ್ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಪರಿಶೀಲನೆ ನಡೆಸಿದರು.
ಮಧ್ಯಾಹ್ನದ ವೇಳೆ ಉತ್ತರ ವಲಯ ಐಜಿಪಿ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಭೈರಗೊಂಡ ಕಾರು ಚಾಲಕ ಲಕ್ಷ್ಮಣ ಹಾಗೂ ಆತನ ಸಹಚರ ಬಾಬುರಾಯ ಸಾವನ್ನಪ್ಪಿದ್ದಾರೆ. ಮಹಾದೇವ ಸಾಹುಕಾರ ಭೈರಗೊಂಡಗೆ ಮೂರು ಗುಂಡು ತಗುಲಿದ್ದು, ಅವರು ವಿಜಯಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Last Updated : Nov 3, 2020, 11:59 AM IST
TAGGED:
ವಿಜಯಪುರ ಶೂಟೌಟ್ ಪ್ರಕರಣ