ಕರ್ನಾಟಕ

karnataka

ETV Bharat / state

ಹುತಾತ್ಮ ಶಿವಾನಂದ ಬಡಿಗೇರ ಪಾರ್ಥೀವ ಶರೀರ ನಾಳೆ ಆಗಮನ, ಜಿಲ್ಲಾಡಳಿತದಿಂದ ಸಕಲ ಸಿದ್ಧತೆ - ಯೋಧ ಶಿವಾನಂದ ಬಡಿಗೇರ ಪಾರ್ಥೀವ ಶರೀರ

ಮುದ್ದೇಬಿಹಾಳದ ಸೈನಿಕ ಮೈದಾನದಲ್ಲಿರುವ ಹುತಾತ್ಮ ಯೋಧರ ಸ್ಮಾರಕದಲ್ಲಿ ಸಾರ್ವಜನಿಕವಾಗಿ ಗೌರವಾರ್ಪಣೆ ನಡೆಯಲಿದೆ. ನಂತರ ಬಸರಕೋಡದ ಪವಾಡ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಅನುಕೂಲ ಕಲ್ಪಿಸಲಾಗಿದೆ..

Soldier Sivananda Badigera body arrives tomorrow
ಯೋಧ ಶಿವಾನಂದ ಬಡಿಗೇರ ಪಾರ್ಥೀವ ಶರೀರ ನಾಳೆ ಆಗಮನ, ಜಿಲ್ಲಾಡಳಿತದಿಂದ ಸಕಲ ಸಿದ್ದತೆ

By

Published : Sep 1, 2020, 8:42 PM IST

ಮುದ್ದೇಬಿಹಾಳ :ದೇಶಕ್ಕೆ ಜೀವ ಕೊಟ್ಟಿರುವ ಶಿವಾನಂದನ ತ್ಯಾಗ, ಬಲಿದಾನ ಎಂದೆಂದಿಗೂ ಅಮರ ಎಂದು ಕುಂಟೋಜಿ ಹಿರೇಮಠದ ಚೆನ್ನವೀರ ದೇವರು ಹೇಳಿದ್ದಾರೆ.

ಯೋಧ ಶಿವಾನಂದ ಬಡಿಗೇರ ಪಾರ್ಥೀವ ಶರೀರ ನಾಳೆ ಆಗಮನ, ಜಿಲ್ಲಾಡಳಿತದಿಂದ ಸಕಲ ಸಿದ್ಧತೆ

ತಾಲೂಕಿನ ಬಸರಕೋಡ ಗ್ರಾಮದ ಯೋಧ ಶಿವಾನಂದ ಬಡಿಗೇರ, ಜಮ್ಮು-ಕಾಶ್ಮೀರದ ವಿದ್ಯುತ್ ಅವಘಡದಲ್ಲಿ ಪ್ರಾಣಾರ್ಪಣೆ ಮಾಡಿದ್ದು, ಅವರ ಮನೆಗೆ ಭೇಟಿ ನೀಡಿದ ಚೆನ್ನವೀರ ದೇವರು, ಕುಟುಂಬದವರಿಗೆ ಸಾಂತ್ವನ ಹೇಳಿದರು. ಸೈನಿಕ ಶಿವಾನಂದ ಮಾಡಿರುವ ತ್ಯಾಗ ಸಣ್ಣ ತ್ಯಾಗವಲ್ಲ, ದೇಶದ ರಕ್ಷಣೆಗಾಗಿ ತನ್ನ ಜೀವವನ್ನೇ ಬಲಿದಾನಗೈದಿದ್ದಾನೆ. ಇಡೀ ಸಮಾಜವೇ ಆತನನ್ನು ನೆನೆಸುವಂತಹ ಕೀರ್ತಿಯನ್ನು ಊರಿಗೆ ತಂದಿದ್ದಾನೆ. ಕುಟುಂಬದವರು ಅವನನ್ನು ಕಳೆದುಕೊಂಡೆವು ಎಂಬ ದುಃಖ ಒಂದು ಕಡೆ ಇರಿಸಿ, ಆತನ ದೇಶಸೇವೆಗೆ ಸಲಾಂ ಹೇಳುವಂತೆ ಕಿವಿಮಾತು ಹೇಳಿದರು.

ಸೆ. 2ರಂದು ಬೆಳಗ್ಗೆ ಪಾರ್ಥೀವ ಶರೀರ ಆಗಮನ :ರಾಜಧಾನಿಯಿಂದ ಮುದ್ದೇಬಿಹಾಳ ಪಟ್ಟಣಕ್ಕೆ ಸೆ.2 ರಂದು ಬೆಳಗ್ಗೆ 11ಗಂಟೆ ಸುಮಾರಿಗೆ ಹುತಾತ್ಮ ಯೋಧ ಶಿವಾನಂದ ಬಡಿಗೇರ ಅವರ ಪಾರ್ಥೀವ ಶರೀರ ಆಗಮಿಸಲಿದೆ. ಮುದ್ದೇಬಿಹಾಳದ ಸೈನಿಕ ಮೈದಾನದಲ್ಲಿರುವ ಹುತಾತ್ಮ ಯೋಧರ ಸ್ಮಾರಕದಲ್ಲಿ ಸಾರ್ವಜನಿಕವಾಗಿ ಗೌರವಾರ್ಪಣೆ ನಡೆಯಲಿದೆ. ನಂತರ ಬಸರಕೋಡದ ಪವಾಡ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಅನುಕೂಲ ಕಲ್ಪಿಸಲಾಗಿದೆ. ಅದಕ್ಕಾಗಿ ತಾಲೂಕಾಡಳಿತ ಬ್ಯಾರಿಕೇಡ್ ಅಳವಡಿಸಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿದ್ದು, ಬಳಿಕ ವಿಶ್ವಕರ್ಮ ಸಮಾಜದ ವಿಧಿವಿಧಾನದಂತೆ ಅಂತ್ಯಕ್ರಿಯೆ ನಡೆಯಲಿದೆ.

ABOUT THE AUTHOR

...view details