ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದ ಯೋಧ ಕಾಶಿರಾಯ ಬೊಮ್ಮನಹಳ್ಳಿ(44) ಜಮ್ಮು ಮತ್ತು ಕಾಶ್ಮೀರದ 'ರಕ್ಷಕ್' ಕಾರ್ಯಾಚರಣೆಯಲ್ಲಿ ವೀರಮರಣ ಹೊಂದಿದ್ದಾರೆ.
'ರಕ್ಷಕ್' ಕಾರ್ಯಾಚರಣೆಯಲ್ಲಿ ಯೋಧ ಹುತಾತ್ಮ: ನಾಳೆ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ - funeral for vijayapura soldier
ಜಮ್ಮು ಮತ್ತು ಕಾಶ್ಮೀರದ 'ರಕ್ಷಕ್' ಕಾರ್ಯಾಚರಣೆಯಲ್ಲಿ ವೀರಮರಣ ಹೊಂದಿರುವ ಯೋಧನ ಮೃತದೇಹದ ಅಂತ್ಯಸಂಸ್ಕಾರ ನಾಳೆ ನಡೆಯಲಿದೆ.

ಯೋಧ ಕಾಶಿರಾಯ ಬೊಮ್ಮನಹಳ್ಳಿ
ಯೋಧನ ಪಾರ್ಥಿವ ಶರೀರವು ನಾಳೆ ಜಮ್ಮು ಮತ್ತು ಕಾಶ್ಮೀರದಿಂದ ಹೊರಟು ಸಾಂಬ್ರಾ ವಿಮಾನ ನಿಲ್ದಾಣ ಮೂಲಕ ಬೆಳಗಾವಿಗೆ ಆಗಮಿಸಲಿದೆ. ನಂತರ ಸ್ವಗ್ರಾಮ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮಕ್ಕೆ ತಲುಪಲಿದೆ. ಆ ಬಳಿಕ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.
ಇದನ್ನೂ ಓದಿ:ವಾಣಿಜ್ಯನಗರಿಯಲ್ಲಿ ಮತ್ತೆ ಮಾರಕಾಸ್ತ್ರಗಳ ಸದ್ದು: ಚಿಕ್ಕಪ್ಪನ ಮಗನಿಗೆ ಮಚ್ಚು ಬೀಸಿ ಎಸ್ಕೇಪ್