ಕರ್ನಾಟಕ

karnataka

ETV Bharat / state

ಅಕ್ಕನ ಮದುವೆಗೆ ಬಂದಿದ್ದ ಯೋಧ ಅಪಘಾತದಲ್ಲಿ ಸಾವು: ಇಂದು ಅಂತ್ಯಕ್ರಿಯೆ - ಅಕ್ಕನ ಮದುವೆಗೆ ಬಂದಿದ್ದ ಯೋಧ ಅಪಘಾತದಲ್ಲಿ ಸಾವು

ಅಕ್ಕನ ಮದುವೆಗೆ ಬಂದಿದ್ದ ಮುದ್ದೇಬಿಹಾಳ ಯೋಧ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಸೇನಾ ಗೌರವದೊಂದಿಗೆ ಮೃತ ಯೋಧನ ಪಾರ್ಥಿವ ಶರೀರದ ಅಂತ್ಯಕ್ರಿಯೆ ಇಂದು ನಡೆಯಲಿದೆ.

soldier died due to road accident
ಸುನೀಲ್ ಆನಂದ ವಿಭೂತಿ

By

Published : May 17, 2022, 9:08 AM IST

ಮುದ್ದೇಬಿಹಾಳ(ವಿಜಯಪುರ):ಭಾರತೀಯ ಸೇನೆಯ ಸಶಸ್ತ್ರ ಸೀಮಾ ಸೇನಾ ಬಲ (ಎಸ್​​ಎಸ್​​ಬಿ) ವಿಭಾಗದಲ್ಲಿ ತರಬೇತಿ ಮುಗಿಸಿ ಮರಳಿ ಕರ್ತವ್ಯಕ್ಕೆ ತೆರಳಬೇಕಿದ್ದ ತಾಲೂಕಿನ ಗೆದ್ದಲಮರಿ ಯೋಧನೊಬ್ಬ ಬೈಕ್ ಅಪಘಾತದಲ್ಲಿ ಸೋಮವಾರ ಸಾವನ್ನಪ್ಪಿದ್ದಾರೆ. ಗೆದ್ದಲಮರಿಯ ಸುನೀಲ್ ಆನಂದ ವಿಭೂತಿ (26) ಮೃತರು.

ಹುನಗುಂದದಿಂದ ಮುದ್ದೇಬಿಹಾಳ ತಾಲೂಕಿನ ಗೆದ್ದಲಮರಿಗೆ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಆತನೊಂದಿಗೆ ಬೈಕ್ ಮೇಲೆ ಇದ್ದ ಸಹೋದರನಿಗೂ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಮನೆಯಲ್ಲಿ ಅಕ್ಕನ ಮದುವೆಗೆಂದು ರಜೆಯ ಮೇಲೆ ಸ್ವಗ್ರಾಮಕ್ಕೆ ಆಗಮಿಸಿದ್ದರು.

ಇವರು 2021ರಲ್ಲಿ ಎಸ್​​ಎಸ್​​ಬಿ ತರಬೇತಿಗೆ ಹಾಜರಾಗಿದ್ದು, ತರಬೇತಿ ಪೂರ್ಣಗೊಳಿಸಿದ್ದಾರೆ. ಸೇವೆಗೆ ಹಾಜರಾಗುವ ಮುನ್ನವೇ ದುರ್ಘಟನೆ ನಡೆದಿದೆ. ಸೇನಾ ಗೌರವದೊಂದಿಗೆ ಇಂದು ಅಂತ್ಯಕ್ರಿಯೆ ನಡೆಯಲಿದೆ. ಹುನಗುಂದ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಇದನ್ನೂ ಓದಿ:ಪೊನ್ನಂಪೇಟೆ ಶಾಲೆಯಲ್ಲಿ ಶಸ್ತ್ರಾಸ್ತ್ರ ತರಬೇತಿ: ಪೊಲೀಸರಿಗೆ ಪಿಎಫ್‌ಐ ದೂರು

ABOUT THE AUTHOR

...view details