ವಿಜಯಪುರ: ಅಸ್ಸೋಂನ ಗುವಾಹಟಿಯಲ್ಲಿ ಹೃದಯಾಘಾತದಿಂದ ನಿಧನರಾದ ಯೋಧನ ಅಂತ್ಯಕ್ರಿಯೆ ಇಂದು ಅವರ ಸ್ವಗ್ರಾಮ ತಿಕೋಟಾ ತಾಲೂಕಿನ ರತ್ನಾಪುರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ಹೃದಯಾಘಾತದಿಂದ ನಿಧನರಾದ ಯೋಧ: ಸ್ವಗ್ರಾಮ ರತ್ನಾಪುರದಲ್ಲಿ ಅಂತ್ಯಕ್ರಿಯೆ - ಹೃದಯಾಘಾತದಿಂದ ಯೋಧ ಸಾವು
ಗುವಾಹಟಿಯಲ್ಲಿ ಹೃದಯಾಘಾತದಿಂದ ನಿಧನರಾದ ಬಿಎಸ್ಎಫ್ ಯೋಧ ಹಣಮಂತ ಮುಂಜೆ ಅವರ ಅಂತ್ಯಕ್ರಿಯೆ ಇಂದು ಅವರ ಗ್ರಾಮ ತಿಕೋಟಾ ತಾಲೂಕಿನ ರತ್ನಾಪುರದಲ್ಲಿ ನೆರವೇರಿತು.
ಹಣಮಂತ ಮುಂಜೆ ಮೃತ ಬಿಎಸ್ಎಫ್ ಯೋಧ
ಹಣಮಂತ ಮುಂಜೆ (40) ಮೃತ ಬಿಎಸ್ಎಫ್ ಯೋಧ. ಇವರು ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ರತ್ನಾಪುರ ಗ್ರಾಮದವರು. ಅಸ್ಸೋಂನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಚಹಾ ಕುಡಿಯುತ್ತಿದ್ದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು.
ನಿನ್ನೆ ಮಧ್ಯಾಹ್ನ ಯೋಧನ ಪಾರ್ಥಿವ ಶರೀರವನ್ನು ಸ್ವಗ್ರಾಮ ರತ್ನಾಪುರಕ್ಕೆ ತರಲಾಗಿತ್ತು. ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು. ತಹಶೀಲ್ದಾರರು, ಸರ್ಕಾರಿ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.