ಕರ್ನಾಟಕ

karnataka

ETV Bharat / state

ಪಿಒಪಿ ಗಣೇಶ ಮೂರ್ತಿಗೆ ಬ್ರೇಕ್​​​​: ಮಣ್ಣಿನ ಗಣಪ ಮಾರಾಟ ಮಾಡಿ ಪರಿಸರ ಸಂರಕ್ಷಣೆ - ಪಿಒಪಿ ಗಣೇಶ

ಪರಿಸರಕ್ಕೆ ಹಾನಿ ಮಾಡುವ ಪಿಒಪಿ ಗಣೇಶ ಪ್ರತಿಷ್ಠಾಪನೆಗೆ ವಿರೋಧ ವ್ಯಕ್ತಪಡಿಸಿರುವ ಸಂಘಟನೆಯೊಂದು, ಮಣ್ಣಿನ ಗಣೇಶ ಮಾರಾಟ ಮಾಡಿ ಪರಿಸರ ರಕ್ಷಿಸಲು ಮುಂದಾಗಿದೆ.

ಪರಿಸರ ಸಂರಕ್ಷಣೆ

By

Published : Sep 1, 2019, 2:08 PM IST

Updated : Sep 1, 2019, 8:37 PM IST

ವಿಜಯಪುರ:ನಗರದಲ್ಲಿ ನನ್ನ ಗಿಡ ನನ್ನ ಭೂಮಿ ಎನ್ನುವ ಸಂಘಟನೆ ಪಿಒಪಿ ಗಣೇಶ ಪ್ರತಿಷ್ಠಾಪನೆ ಬೇಡ ಎನ್ನುವ ಉದ್ದೇಶದಿಂದ ಮಣ್ಣಿನ ಗಣೇಶನ ಮಾರಾಟಕ್ಕೆ ಮುಂದಾಗಿದೆ.

ಕಡಿಮೆ ದರದಲ್ಲಿ ಮಣ್ಣಿನ ಗಣೇಶ ಮೂರ್ತಿ ಮಾರಾಟ ಮಾಡುವ ಮೂಲಕ ಪರಿಸರ ಪ್ರೇಮ ಮೆರೆಯುತ್ತಿದೆ. ನಗರದಲ್ಲಿ ಕನಿಷ್ಠ 1 ಲಕ್ಷಕ್ಕೂ ಅಧಿಕವಾಗಿ ಗಣೇಶ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಇದರಲ್ಲಿ 250 ಗಣೇಶ ಪ್ರತಿಷ್ಠಾಪನೆ ಸಾರ್ವಜನಿಕವಾಗಿರುತ್ತದೆ. ಇವರಲ್ಲಿ ಮೊದಲು ಜಾಗೃತಿ ಮೂಡಿಸಿ ನಂತರ ಮನೆ ಮನೆಗೆ ತೆರಳಿ ಮಣ್ಣಿನ ಗಣೇಶ ಮೂರ್ತಿಯ ಮಹತ್ವವನ್ನು ತಿಳಿಸಲಾಗುತ್ತಿದೆ. ನಗರದಲ್ಲಿ ಒಟ್ಟು ಐದು ಸ್ಥಳದಲ್ಲಿ ನನ್ನ ಗಿಡ ನನ್ನ ಭೂಮಿ ಸಂಘಟನೆಯಿಂದ ಮಣ್ಣಿನ ಗಣೇಶನ ಮೂರ್ತಿಗಳನ್ನು ಅತಿ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಸಾರ್ವಜನಿಕರು ಪಿಒಪಿ ಗಣೇಶ ಪ್ರತಿಷ್ಠಾಪನೆ ಮಾಡುವುದರಿಂದ ಆಗುವ ಪರಿಸರ ಹಾನಿ ಬಗ್ಗೆ ತಿಳುವಳಿಕೆ ನೀಡಲಾಗುತ್ತಿದೆ. ಈ ಬಾರಿ ಪರಿಸರ ಸ್ನೇಹಿ ಗಣಪ ನಮ್ಮ ಸಂಕಲ್ಪ ಆಗಲಿ ಎನ್ನುವ ಧ್ಯೇಯದೊಂದಿಗೆ ಗಣೇಶ ಮೂರ್ತಿ ಮಾರಾಟಕ್ಕೆ ಮುಂದಾಗಿದೆ.

ಮಣ್ಣಿನ ಗಣೇಶ ಮೂರ್ತಿ ಮಾರಟ ಮಾಡಿ ಪರಿಸರ ಸಂರಕ್ಷಣೆ

ಉತ್ತರ ಕರ್ನಾಟಕದಲ್ಲಿ ಈ ಬಾರಿ ಪ್ರವಾಹ ಬಂದಿರುವ ಹಿನ್ನೆಲೆಯಲ್ಲಿ ಗಣೇಶ ಉತ್ಸವವನ್ನು ಸರಳವಾಗಿ ಆಚರಿಸಲಾಗುತ್ತಿದೆ. ಅದರಲ್ಲಿಯೂ ಪ್ರವಾಹ ಪೀಡಿತ ಗೋಕಾಕ ತಾಲೂಕಿನ ಕೊಣ್ಣೂರು ಗ್ರಾಮದಿಂದ ಸುಮಾರು 10 ಸಾವಿರಕ್ಕೂ ಹೆಚ್ಚು ಮಣ್ಣಿನ ಗಣಪತಿಯನ್ನು ಖರೀದಿಸಿ ತರಲಾಗಿದೆ. ಬೇಡಿಕೆ ಹೆಚ್ಚಾಗಿದ್ದರೂ ಸಹ ಪ್ರವಾಹದಿಂದ ಮನೆ ಮಠ ಕಳೆದುಕೊಂಡಿರುವ ಗಣೇಶ ಮೂರ್ತಿ ತಯಾರಕರು ಕಷ್ಟದಲ್ಲಿ ಬೇರೆ ಕಡೆಯಿಂದ ಮಣ್ಣು ತರಿಸಿಕೊಂಡು ಮಣ್ಣಿನ ಗಣೇಶನನ್ನು ತಯಾರಿಸಿದ್ದಾರೆ. ಅವರ ಸಹಾಯಕ್ಕಾಗಿ ಸಹ ನನ್ನ ಗಿಡ ನನ್ನ ಭೂಮಿ ಸಂಘಟನೆ ಮುಂದಾಗಿದೆ.

Last Updated : Sep 1, 2019, 8:37 PM IST

ABOUT THE AUTHOR

...view details