ವಿಜಯಪುರ: ರಾಷ್ಟ್ರೀಯ ಹೆದ್ದಾರಿ 50ರ ಆಹೇರಿ ಕ್ರಾಸ್ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದವರ ಮೇಲೆ ಸಿಂದಗಿ ಪೊಲೀಸರು ದಾಳಿ ನಡೆಸಿ ಆರು ಜನರನ್ನು ಬಂಧಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಗಾಂಜಾ ಮಾರಾಟ: ಆರು ಮಂದಿ ಅರೆಸ್ಟ್ - ಎನ್.ಡಿ.ಪಿ.ಎಸ್ ಆ್ಯಕ್ಟ್
ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರು ಜನರನ್ನು ಸಿಂದಗಿ ಠಾಣೆ ಪೊಲೀಸರು ಬಂಧಿಸಿ, 2 ಕೆಜಿ 300 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಸಿಂದಗಿ ತಾಲೂಕಿನ ಕಕ್ಕಳಮೇಲಿ ಗ್ರಾಮದ ಸುರೇಶ ಹೊನಗುಡೆಪ್ಪ ನಾಟೀಕಾರ (28), ಆಲಮೇಲದ ಬಾಬು ಮಲಾರಿ ಲಾವಟೆ(70) ಹಾಗೂ ಪಕ್ಕದ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಬಡದಾಳ ಗ್ರಾಮದ ಮಡಿವಾಳಪ್ಪ ಕಲ್ಯಾಣಪ್ಪ ಪರೀಟ್ (21) ಮೂವರು ಸೇರಿಕೊಂಡು ಬೆಂಗಳೂರಿನ ಮೂಡಲ ಪಾಳ್ಯದ ಶರತ್ ಶ್ರೀನಿವಾಸ (29), ಮನೋಜ ಸುರೇಶ ಮತ್ತು ಮಾಗಡಿಯ ನಿವಾಸಿ ಗಗನ ಕೃಷ್ಣಮೂರ್ತಿ(21) ಎಂಬುವವರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಇನ್ನು ಬಂಧಿತರಿಂದ 25 ಸಾವಿರ ರೂ. ಮೌಲ್ಯದ 2 ಕೆಜಿ 300 ಗ್ರಾಂ ಗಾಂಜಾ, ಒಂದು ಕಾರು ಮತ್ತು ಒಂದು ಮೋಟರ್ ಸೈಕಲ್ ವಶಕ್ಕೆ ಪಡೆುದುಕೊಂಡು ಆರು ಜನರ ವಿರುದ್ಧ ಸಿಂದಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.