ಕರ್ನಾಟಕ

karnataka

ETV Bharat / state

ನಾಳೆ ಸಿಂದಗಿ ಉಪಚುನಾವಣೆ ಫಲಿತಾಂಶ, ಮತ ಎಣಿಕೆಗೆ ಸಕಲ ಸಿದ್ಧತೆ

ಅಕ್ಟೋಬರ್​ 30ರಂದು ಸಿಂದಗಿ ಉಪಚುನಾವಣೆಗೆ ಮತದಾನ ನಡೆದಿದೆ. ನಾಳೆ(ಮಂಗಳವಾರ) ಮತ ಎಣಿಕೆ ಕಾರ್ಯ ನಡೆಯಲಿದೆ. ಇದಕ್ಕಾಗಿ ಜಿಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.

District Collector Sunil Kumar
ಜಿಲ್ಲಾಧಿಕಾರಿ ಸುನಿಲ್​ ಕುಮಾರ್​​

By

Published : Nov 1, 2021, 3:53 PM IST

Updated : Nov 1, 2021, 5:19 PM IST

ವಿಜಯಪುರ:ಸಿಂದಗಿ ಉಪಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದ್ದು ನಾಳೆ ಬೆಳಗ್ಗೆ 8 ಗಂಟೆಯಿಂದ ನಗರದ ಸೈನಿಕ ಶಾಲೆ ಒಡೆಯರ ಸದನದಲ್ಲಿ ಮತ ಎಣಿಕೆ ನಡೆಯಲಿದೆ. ಇಂದು ಜಿಲ್ಲಾಧಿಕಾರಿ ಪಿ.ಸುನೀಲ್​ ಕುಮಾರ್​, ಎಸ್ಪಿ ಆನಂದ್​ ಕುಮಾರ್​​ ಮತ ಎಣಿಕಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಿಂದಗಿ ಕ್ಷೇತ್ರದಲ್ಲಿ ಒಟ್ಟು 2,34,437 ಮತದಾರರಿದ್ದಾರೆ. ಈ ಪೈಕಿ 1,30,939 ಪುರುಷರು, 1,13,466 ಮಹಿಳೆಯರು ಹಾಗು 32 ಇತರೆ ಮತದಾರರಿದ್ದಾರೆ.

ಮತ ಎಣಿಕೆಗೆ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಹಾಗೂ ಎಸ್ಪಿ

ಅಕ್ಟೋಬರ್‌ 30ರಂದು ನಡೆದ ಮತದಾನದಲ್ಲಿ 85,859 ಪುರುಷರು, 76,990 ಮಹಿಳೆಯರು ಮತ್ತು ಮೂವರು ಇತರೆ ಮತದಾರರು ಸೇರಿ 1,62,852 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. 22 ಸುತ್ತಿನ ಮತ ಎಣಿಕೆ ಕಾರ್ಯ ನಡೆಯಲಿದ್ದು, ಎರಡು ಕೇಂದ್ರದಲ್ಲಿ 7 ಟೇಬಲ್ ಸೇರಿ 14 ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಈ ವೇಳೆ, ಒಟ್ಟು 271 ಮತಪೆಟ್ಟಿಗಳ ಮತ ಎಣಿಕೆ ಕಾರ್ಯ‌ ನಡೆಯಲಿದೆ.

ಪೊಲೀಸ್ ಭದ್ರತೆ:

ಮತ ಎಣಿಕೆ ಕಾರ್ಯ ನಡೆಯುವ ಸೈನಿಕ ಶಾಲೆ ಆವರಣದಲ್ಲಿ ಸೆಂಟ್ರಲ್ ಪ್ಯಾರಾ ಮಿಲಿಟರಿಯಿಂದ 50, ಸಶಸ್ತ್ರ ಮೀಸಲು ಪಡೆಯಿಂದ ಸುಮಾರು 60, 150 ಸಿವಿಲ್ ಪೊಲೀಸರನ್ನು ನಿಯೋಜಿಸಲಾಗಿದೆ. ಇದರ ಜೊತೆಗೆ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ 4 ಕೆಎಸ್​​ಆರ್​​ಪಿ ತಕಡಿ ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದ್​ ಕುಮಾರ್​ ತಿಳಿಸಿದರು.

ಸಿಂದಗಿ ಕ್ಷೇತ್ರದ ಪ್ರಮುಖ ಅಭ್ಯರ್ಥಿಗಳು

ಜಿಲ್ಲಾಧಿಕಾರಿ ಪಿ.ಸುನೀಲ್​​ ಕುಮಾರ್​​ ಮಾತನಾಡಿ, ಮತಎಣಿಕೆಗೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೇಂದ್ರದಲ್ಲಿ ಅಭ್ಯರ್ಥಿಗಳ ಎಜೆಂಟರ್​​​​ಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಬೇರೆ ಯಾರಿಗೂ ಅವಕಾಶವಿಲ್ಲ. ಕೋವಿಡ್ ನಿಯಮ ಮಾರ್ಗದರ್ಶಿ ಅನುಸರಿಸಿ ಎಣಿಕೆ ಕಾರ್ಯ ನಡೆಯಲಿದೆ. ಇದರ ಜೊತೆಗೆ ಕೊರೊನಾ ನಿಯಮ ಪಾಲನೆಯಲ್ಲಿ ವಿಜಯೋತ್ಸವ ಆಚರಿಸಲು ಅವಕಾಶ ಕೊಡಲಾಗಿದೆ ಎಂದರು.

ಸಿಂದಗಿ ಉಪಚುನಾವಣಾ ಕಣದಲ್ಲಿ ಒಟ್ಟು 6 ಅಭ್ಯರ್ಥಿಳಿದ್ದಾರೆ. ಬಿಜೆಪಿಯಿಂದ ರಮೇಶ್​​ ಭೂಸನೂರ, ಕಾಂಗ್ರೆಸ್​​​​ನಿಂದ ಅಶೋಕ ಮನಗೂಳಿ, ಜೆಡಿಎಸ್‌ನಿಂದ ನಾಜಿಯಾ ಅಂಗಡಿ, ಕರ್ನಾಟಕ ರಾಷ್ಟ್ರ ಸಮಿತಿ ಡಾ.ಸುನೀಲ್​ ಕುಮಾರ ಹಟ್ಟಿ ಹಾಗು ಪಕ್ಷೇತರ ಅಭ್ಯರ್ಥಿಗಳಾಗಿ ಜಿಲಾನಿ ಮುಲ್ಲಾ, ದೀಪಿಕಾ.ಎಸ್ ಸ್ಪರ್ಧಿಸಿದ್ದಾರೆ.

ಇದನ್ನೂ ಓದಿ: ಬೈ ಎಲೆಕ್ಷನ್​​: ಹಾನಗಲ್​​ನಲ್ಲಿ ಶೇ 84. ಸಿಂದಗಿ ಕ್ಷೇತ್ರದಲ್ಲಿ ಶೇ. 69 ರಷ್ಟು ವೋಟಿಂಗ್​

Last Updated : Nov 1, 2021, 5:19 PM IST

ABOUT THE AUTHOR

...view details