ವಿಜಯಪುರ:ಮಣ್ಣೆತ್ತಿನ ಅಮವಾಸ್ಯೆ ಬಂದ್ರೆ ಸಾಕು ಉತ್ತರ ಕರ್ನಾಟಕದಲ್ಲಿ ಹಬ್ಬದ ವಾತಾವರಣ ಮನೆ ಮಾಡಿರುತ್ತೆ. ರೈತರು ಬೆಳೆಗಳು ಸಮೃದ್ಧವಾಗಿ ಬರಲೆಂದು ವಿಶೇಷವಾಗಿ ಈ ಹಬ್ಬವನ್ನು ಆಚರಿಸುತ್ತಾರೆ. ಆದರೆ ಕೊರೊನಾ ಹಬ್ಬದ ಛಾಯೆಯನ್ನು ಕಿತ್ತುಕೊಂಡಿದೆ.
ಮಣ್ಣಿನಿಂದ ತಯಾರಿಸಿದ ಎತ್ತುಗಳಿಗೆ ಇಂದು ಪೂಜೆ ಸಲ್ಲಿಸಲಾಗುತ್ತದೆ. ಆದರೆ ಕೊರೊನಾದಿಂದ ಜನರು ಈ ಬಾರಿ ಹಬ್ಬದಿಂದ ದೂರ ಉಳಿಯುವಂತಾಗಿದೆ. ಅಲ್ಲದೆ ಸೂರ್ಯ ಗ್ರಹಣ ಕೂಡ ಹಬ್ಬಕ್ಕೆ ಕೊಕ್ಕೆ ಹಾಕಿದ ಪರಿಣಾಮ, ನಗರದ ಜನತೆ ಸಂಜೆಯಾಗುತ್ತಿದ್ದಂತೆ ಮನೆಗಳಲ್ಲಿ ಮಣ್ಣಿನ ಎತ್ತುಗಳಿಗೆ ಪೂಜೆ ಸಲ್ಲಿಸಿ ಸರಳವಾಗಿ ಹಬ್ಬ ಆಚರಿಸಿದ್ದಾರೆ.