ವಿಜಯಪುರ: ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯ ಖಂಡಿಸಿ ಸ್ಲಂ ಅಭಿವೃದ್ಧಿ ಸಮಿತಿ ಹಾಗೂ ಮಹಿಳಾ ಸಂಘಟನೆ ಒಕ್ಕೂಟದ ಕಾರ್ಯಕರ್ತರು ರಸ್ತೆ ಬದಿಯಲ್ಲಿ ಮೇಣದ ಬತ್ತಿ ಹಿಡಿದು ಮೌನ ಪ್ರತಿಭಟನೆ ನಡೆಸಿದರು.
ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ ಖಂಡಿಸಿ ಮೌನ ಪ್ರತಿಭಟನೆ - ವಿಜಯಪುರ ಪ್ರತಿಭಟನೆ ಸುದ್ದಿ
ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರಗಳು ನಡೆಯದಂತೆ ರಕ್ಷಣೆ ನೀಡಬೇಕು ಎಂದು ಸ್ಲಂ ಅಭಿವೃದ್ಧಿ ಸಮಿತಿ ಹಾಗೂ ಮಹಿಳಾ ಸಂಘಟನೆ ಒಕ್ಕೂಟದ ಕಾರ್ಯಕರ್ತರು ಫಲಕ ಹಿಡಿದು ರಸ್ತೆ ಬದಿಯಲ್ಲಿ ಮೌನ ಪ್ರತಿಭಟನೆ ನಡೆಸಿದರು.
ನಗರದ ಗಾಂಧಿ ವೃತ್ತದಿಂದ ಸಿಂದಗಿ ನಾಕಾದವರೆಗೆ ನೂರಾರು ಮಹಿಳೆಯರು ಕೈಯಲ್ಲಿ ಮೇಣದ ಬತ್ತಿ ಹಿಡಿದು ಮೌನ ಪ್ರತಿಭಟನೆ ನಡೆಸಿದರು. ಸಮಾಜದಲ್ಲಿ ಹೆಣ್ಣನ್ನು ಗೌರವಿಸಬೇಕು. ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರಗಳು ನಡೆಯದಂತೆ ರಕ್ಷಣೆ ನೀಡುವಂತೆ ಫಲಕ ಹಿಡಿದು ರಸ್ತೆ ಬದಿಯಲ್ಲಿ ಮೌನ ಪ್ರತಿಭಟನೆ ನಡೆಸಿದರು.
ಇನ್ನು ಉತ್ತರಪ್ರದೇಶ, ಹೈದರಾಬಾದ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಹಿಳೆಯರ ಮೇಲೆ ನಿರಂತರವಾಗಿ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮಹಿಳೆಯರಿಗೆ ಸರ್ಕಾರ ರಕ್ಷಣೆ ನೀಡುವುದರ ಜೊತೆಗೆ ಕಾಮುಕರ ಹೆಡೆಮುರಿ ಕಟ್ಟಲು ಸೂಕ್ತ ಕಾನೂನು ರೂಪಿಸುವಂತೆ ಪ್ರತಿಭಟನಾನಿರತರು ಫಲಕಗಳನ್ನ ಪ್ರದರ್ಶನ ಮಾಡಿದರು.