ಕರ್ನಾಟಕ

karnataka

ETV Bharat / state

ನಮಗೂ ವಿಶೇಷ ಪ್ಯಾಕೇಜ್ ಘೋಷಿಸಿ: ಫ್ಲವರ್ಸ್‌ & ಡೆಕೊರೇಟರ್ಸ್‌ ಮಾಲೀಕರ ಮನವಿ - Siddu Hebbal appeal to govt for special package

ಡೆಕೋರೇಟರ್ಸ್, ಮಂಟಪ, ಶಾಮಿಯಾನ ಹಾಗೂ ಫೋಟೋಗ್ರಾಫರ್​ಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಸಿದ್ದು ಹೆಬ್ಬಾಳ ಮನವಿ ಮಾಡಿದ್ದಾರೆ.

Muddebihal
ಫ್ಲಾವರ್ಸ್ & ಡೆಕೋರೇಟರ್ಸ್ ಮಾಲೀಕ ಸಿದ್ದು ಹೆಬ್ಬಾಳ

By

Published : May 20, 2021, 11:02 AM IST

ಮುದ್ದೇಬಿಹಾಳ: ಕೋವಿಡ್ ಎರಡನೇ ಅಲೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಶಾಮಿಯಾನ, ಮಂಟಪ, ಡೆಕೋರೇಟರ್ಸ್ ಹಾಗೂ ಫೋಟೋಗ್ರಾಫರ್ಸ್​ಗಳಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಕುಂಟೋಜಿಯ ಫ್ಲವರ್ಸ್ & ಡೆಕೋರೇಟರ್ಸ್ ಮಾಲೀಕ ಸಿದ್ದು ಹೆಬ್ಬಾಳ ಒತ್ತಾಯಿಸಿದ್ದಾರೆ.

ಫ್ಲಾವರ್ಸ್ & ಡೆಕೋರೇಟರ್ಸ್ ಮಾಲೀಕ ಸಿದ್ದು ಹೆಬ್ಬಾಳ

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ಸದ್ಯ ಮದುವೆ, ಶುಭ ಸಮಾರಂಭ ಹಾಗೂ ರಾಜಕೀಯ ಸಮಾವೇಶಗಳು ಸ್ಥಗಿತಗೊಂಡಿವೆ. ಇದರಿಂದ ನಮ್ಮ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಕಳೆದ ಬಾರಿಯೂ ನಮಗೆ ಪರಿಹಾರ ಸಿಗಲಿಲ್ಲ. ಈ ಬಾರಿಯಾದರೂ ಸರ್ಕಾರ ನಮ್ಮ ಕುಟುಂಬಗಳ ನೆರವಿಗೆ ಬರಬೇಕು ಎಂದು ಆಗ್ರಹಿಸಿದರು.

ಆರ್ಥಿಕ ಸಂಕಷ್ಷದ ಸುಳಿಗೆ ಸಿಲುಕಿರುವ ಕಾರ್ಮಿಕರು, ಮಾಲೀಕರಿಗೆ ಆರ್ಥಿಕ ಪ್ಯಾಕೇಜ್ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ABOUT THE AUTHOR

...view details