ವಿಜಯಪುರ: ಸಿದ್ದೇಶ್ವರ ಸ್ವಾಮೀಜಿ ಅನಾರೋಗ್ಯ ಹಿನ್ನೆಲೆಯಲ್ಲಿ ನಗರದ ಬಿಎಲ್ಡಿಇ ಸಂಸ್ಥೆಯ ಬಿಎಂ ಪಾಟೀಲ್ ಮೆಡಿಕಲ್ ಕಾಲೇಜ್ ಹಾಗೂ ಹಾಸ್ಪಿಟಲ್ನ ವೈದ್ಯರ ತಂಡ ಆರೋಗ್ಯ ಪರೀಕ್ಷಿಸಿದೆ. ವೈದ್ಯರಾದ ಡಾ ಎಸ್ ಬಿ ಪಾಟೀಲ್, ಡಾ ಅರವಿಂದ ಪಾಟೀಲ್ ನೇತೃತ್ವದಲ್ಲಿ ಶ್ರೀಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಸ್ವಾಮೀಜಿಗಳಿಗೆ ಚಿಕಿತ್ಸೆ ನೀಡಿದ ಬಳಿಕ ಮಾತನಾಡಿದ ಡಾ ಎಸ್ ಬಿ ಪಾಟೀಲ್, ಸ್ವಾಮೀಜಿ ಆರೋಗ್ಯವಾಗಿದ್ದಾರೆ. ಎಂದಿನಂತೆ ಆಹಾರ ಸೇವನೆ ಮಾಡುತ್ತಿದ್ದಾರೆ. ಪಲ್ಸ್ ಬಿಪಿ ಸಹಜವಾಗಿದೆ. ಯಾರೂ ಸುಳ್ಳು ವದಂತಿಗೆ ಕಿವಿಗೊಡಬೇಡಿ. ಸ್ವಾಮೀಜಿಗಳ ಆರೋಗ್ಯಕ್ಕಾಗಿ ಪ್ರಾರ್ಥನೆ ಮಾಡಿ. ಕೊರೋನಾ ಮುಂಜಾಗ್ರತಾ ಕ್ರಮವಾಗಿ ಭಕ್ತರ ದರ್ಶನ ಮಾಡಬಾರದು ಎಂದು ಸಲಹೆ ನೀಡಿದ್ದೇವೆ. ಹೀಗಾಗಿ ನಾಳೆಯಿಂದ ಸ್ವಾಮೀಜಿಗಳು ಆನ್ಲೈನ್ ಮೂಲಕ ದರ್ಶನ ನೀಡಲಿದ್ದಾರೆ ಎಂದು ಹೇಳಿದರು.