ವಿಜಯಪುರ:ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ಇತರೆ ರಾಜಕಾರಣಿಗಳ ಬಗ್ಗೆ ಹಗುರವಾಗಿ ಮಾತಾಡುತ್ತಿರುವುದನ್ನು ನಿಲ್ಲಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ ಹೇಳಿದ್ದಾರೆ.
ಅಹಂಕಾರದಿಂದ ಸಿದ್ದರಾಮಯ್ಯ ಬೇರೆಯವರ ಬಗ್ಗೆ ಹಗುರವಾಗಿ ಮಾತನಾಡ್ತಿದಾರೆ: ಅರುಣ್ ಶಹಾಪುರ - vijayapura news
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ಬೇರೆ ರಾಜಕಾರಣಿಗಳ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ ಕಿಡಿಕಾರಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಏಳು ಬಾರಿ ಶಾಸಕರಾಗಿರುವ ಹಾಗೂ ಪ್ರಸ್ತುತ ಪ್ರತಿಪಕ್ಷದ ನಾಯಕರಾಗಿರುವ ಅವರಲ್ಲಿ ಅಹಂಕಾರ ತುಂಬಿದೆ. ಏಕವಚನದಲ್ಲಿ ಬೇರೆಯವರನ್ನು ನಿಂದಿಸುವುದು ಸರಿಯಲ್ಲ. ಸಿದ್ದರಾಮಯ್ಯ ಬೇರೆಯವರಿಂದ ಬುದ್ಧಿ ಹೇಳಿಸಿಕೊಳ್ಳುವ ಪರಿಸ್ಥಿತಿಗೆ ಬಂದಿರೋದು ವಿಪರ್ಯಾಸ. ಕಾಂಗ್ರೆಸ್ ಪಕ್ಷಕ್ಕೆ ಸಿದ್ದರಾಮಯ್ಯವನರ ಅನಿವಾರ್ಯತೆ ಇರಬಹುದು. ಆದ್ರೆ, ರಾಜ್ಯದ ಜನರಿಗಿಲ್ಲ. ಬೇರೆ ರಾಜಕಾರಣಿಗಳ ಬಗ್ಗೆ ಅವರು ಪ್ರಯೋಗಿಸುವ ಪದಗಳು ಹಾವಭಾವಗಳು ಉತ್ತರ ಕರ್ನಾಟಕ ಜನತೆಗೆ ಮುಜುಗರ ಉಂಟು ಮಾಡುತ್ತಿವೆ.
ಗುಳೇದಗುಡ್ಡದ ಜನ ಸಂಪರ್ಕ ಸಭೆಯಲ್ಲಿ ಅವರು ನಡೆದುಕೊಂಡ ರೀತಿ ಸರಿಯಲ್ಲ. ಬೇರೆಯವರಿಗೆ ತಿವಿದು ಮಾತನಾಡುವುದು ಹಾಗೂ ಅಹಂಕಾರದ ನಡುವಳಿಕೆಯಿಂದ ಸಿದ್ದರಾಮಯ್ಯ ಅವರನ್ನು ಮೈಸೂರಿನ ಜನ ಸೋಲಿಸಿದ್ದಾರೆ. ನಮ್ಮ ಉತ್ತರ ಕರ್ನಾಟಕದ ಬಾದಾಮಿ ಜನ ನಿಮ್ಮನ್ನು ಕೈ ಹಿಡಿದಿದ್ದಾರೆ. ಸಂವಿಧಾನಬದ್ಧವಾಗಿರುವ ವಿಧಾನಸಭಾಧ್ಯಕ್ಷರ ವಿರುದ್ಧ ಸಿದ್ದರಾಮಯ್ಯ ಬಹಳ ಹಗುರವಾಗಿ, ಏಕ ವಚನದಲ್ಲಿ ಮಾತನಾಡುವುದು ಸರಿಯಲ್ಲ ಎಂದು ಶಹಾಪುರ ಕುಟುಕಿದರು.