ವಿಜಯಪುರ: ರಾಜ್ಯದ ಕಾಪು ಹಾಗೂ ವಿಜಯಪುರದ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಆಯುಧ ಪೂಜೆಯ ದಿನ ಪೊಲೀಸರು ಕೇಸರಿ ಬಟ್ಟೆ ಧರಿಸಿರುವುದನ್ನು ನಾನು ವಿರೋಧ ಮಾಡಿದ್ದೇನೆಯೇ ಹೊರತು ಬೇರೆ ಏನೂ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿ ಪರ ಚುನಾವಣೆ ಪ್ರಚಾರಕ್ಕೆ ಮೋರಟಗಿಗೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಸರ್ಕಾರಿ ಅಧಿಕಾರಿಗಳಾಗಿ ಪೊಲೀಸ್ ಠಾಣೆಯಲ್ಲಿ ಕೇಸರಿ ಬಟ್ಟೆ, ಶಾಲು ಧರಿಸಿದ್ದು ತಪ್ಪು. ಅದರ ಬದಲಿಗೆ ಬೇರೆ ಯಾವುದೇ ಬಟ್ಟೆ ಹಾಕಿಕೊಂಡಿದ್ದರೂ ಸಹ ಯಾವುದೇ ಆಕ್ಷೇಪ ವ್ಯಕ್ತಪಡಿಸುತ್ತಿರಲಿಲ್ಲ. ಪೊಲೀಸರನ್ನು ಕೇಸರಿಕರಣ ಮಾಡಲು ಹೊರಟಿದ್ದಾರೆ. ಹಾಗೆ ಮಾಡಲು ಬರುವುದಿಲ್ಲ. ಆರ್ಎಸ್ಎಸ್ನವರು ಏನಾದರೂ ಮಾಡಿಕೊಳ್ಳಲಿ. ಆದರೆ, ಸರ್ಕಾರಿ ನೌಕರರನ್ನು ಈ ರೀತಿ ಕೇಸರಿಕರಣ ಮಾಡಬಾರದು ಎಂದು ಹೇಳಿದರು.
ಇದನ್ನೂ ಓದಿ:ಪೊಲೀಸರ ದಿರಿಸು ಯಾಕೆ ಬದಲಾಯಿಸಿದಿರಿ, ಕೈಗೆ ತ್ರಿಶೂಲ ಕೊಟ್ಟು ಹಿಂಸೆಯ ದೀಕ್ಷೆ ಕೊಟ್ಟು ಬಿಡಿ.. ಸಿಎಂಗೆ ಸಿದ್ದು ಟ್ವೀಟಾಸ್ತ್ರ