ವಿಜಯಪುರ: ರಸ್ತೆ ವಿಚಾರವಾಗಿ ಮನವಿ ಸಲ್ಲಿಸಲು ಗ್ರಾಮಸ್ಥರೊಂದಿಗೆ ಮಾಜಿ ಸಚಿವ ಹೆಚ್.ವೈ.ಮೇಟಿ ಆಗಮಿಸಿದ್ದಾಗ ಅವರ ಮೇಲೆ ಸಿದ್ದರಾಮಯ್ಯ ಗರಂ ಆದರು. ಈ ಸರ್ಕಾರ ಏನೂ ಮಾಡಲ್ಲ, ನಮ್ಮ ಸರ್ಕಾರ ಬಂದಾಗ ಹೇಳಯ್ಯ ಎಂದು ಗದರಿಸಿದರು.
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ನಿನ್ನೆ ಆಲಮಟ್ಟಿಯಲ್ಲಿ ವಾಸ್ತವ್ಯ ಹೂಡಿದ್ದರು. ವಿಜಯಪುರದ ಕೆಲ ಸ್ಥಳಕ್ಕೆ ಭೇಟಿ ಕೊಟ್ಟಿದ್ದರು. ಇಂದು ಸ್ವಕ್ಷೇತ್ರ ಬಾದಾಮಿಯಲ್ಲಿ ನಡೆಯಲಿರುವ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ರಸ್ತೆ ಮಾರ್ಗವಾಗಿ ಆಲಮಟ್ಟಿಯಿಂದ ತೆರಳಿದರು.