ಮುದ್ದೇಬಿಹಾಳ: ಜಾನಪದ ಸಾಹಿತ್ಯದಲ್ಲಿ ತಮ್ಮದೇ ಛಾಪು ಮೂಡಿಸಿರುವ ಬೀಳಗಿಯ ಆಶು ಕವಿ ಸಿದ್ದಣ್ಣ ಬಿದರಿ ಪ್ರಸ್ತುತ ರಾಜಕೀಯ, ಜಾತಿ ವ್ಯವಸ್ಥೆ, ಮಠಾಧೀಶರ ಹೋರಾಟದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ನಿನ್ನೆ ತಮ್ಮ ಪುಸ್ತಕಗಳ ಪ್ರಚಾರ ಮಾರಾಟಕ್ಕೆಂದು ಆಗಮಿಸಿದ್ದ ಅವರು ಮಾದ್ಯಮಗಳೊಂದಿಗೆ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ರಾಜಕೀಯ ಕ್ಷೇತ್ರದಲ್ಲಿ ನಡೆದಿರುವ ತಲ್ಲಣಗಳ ಕುರಿತು ವಿಡಂಬನಾತ್ಮಕವಾಗಿ ವಿವರಿಸಿದರು.
ಮೀಸಲಾತಿ ಹೋರಾಟದ ಕುರಿತು ಜಾನಪಾದ ಸಾಹಿತಿ ಸಿದ್ದಣ್ಣ ಬಿದರಿ ಹೇಳಿದ್ದೇನು? ಮಾಡಬಾರದ್ದನ್ನು ಮಾಡಿದರೂ ದೇವರೆಂದು ಪೂಜಿಸುತ್ತಾರೆ
ಯಾರನ್ನು ಚುನಾಯಿಸಬೇಕೋ ಅವರನ್ನು ಚುನಾಯಿಸಿಲ್ಲ. ಯಾರು ಯಾವ ಕೆಲಸ ಮಾಡಬಾರದೋ ಇಂದು ಅವರೇ ಅಂತಹ ಕೆಲಸ ಮಾಡುತ್ತಿದ್ದಾರೆ. ಅಂತಹ ಕೆಲಸ ಮಾಡಿದರೂ ಅವರನ್ನು ದೇವರೆಂದು ಪೂಜಿಸುವ ಕೆಲಸ ನಡೆದಿದೆ. ಯಾವುದು ಯಾವ ಹಾದಿಯಲ್ಲಿ ಸಾಗಬೇಕಿದೆಯೋ ಅದು ಹಾಗೆ ಸಾಗಿದರೆ ಸಮಾಜ ಸುಸೂತ್ರವಾಗಿ ಸಾಗಲಿದೆ ಎಂದರು.
ಪ್ರಬಲ ಜಾತಿಯವರೇ ಮೀಸಲಾತಿ ಪಡೆಯಲು ಹೋರಾಡುತ್ತಿದ್ದಾರೆ
ಜಾತಿ ಜಾತಿ ಎಂದು ಬಡಿದಾಡುತ್ತಿದ್ದಾರೆ. ಪ್ರಬಲ ಜಾತಿಯವರೇ ಮೀಸಲಾತಿ ಪಡೆದುಕೊಳ್ಳಲು ಹೋರಾಡುತ್ತಿರುವುದನ್ನು ಕಂಡರೆ ಸಮಾಜ ಎತ್ತ ಸಾಗುತ್ತಿದೆ ಎಂದು ತಮ್ಮ ಮಾತುಗಳಲ್ಲಿ ಹೇಳಿಕೊಂಡರು. ಎಲ್ಲರೂ ಮೊಬೈಲ್‌ನಲ್ಲಿಯೇ ಕಾಲ ಕಳೆಯುವಂತಾಗಿದೆ. ಪುಸ್ತಕಗಳನ್ನು ಓದುವ ಸಂಸ್ಕೃತಿ ಕಡಿಮೆ ಆಗಿದೆ. ಪುಸ್ತಕಗಳನ್ನು ಬರೆದಿದ್ದೇನೆ. ಅವುಗಳು ಬೇಕಾದರೆ ನನ್ನ ಮೊಬೈಲ್‌ಗೆ ಸಂಪರ್ಕಿಸಿ ಎಂದು ಮನವಿ ಮಾಡಿದರು.