ವಿಜಯಪುರ:ಇಲ್ಲಿನ ಕೇಂದ್ರ ಬಸ್ನಿಲ್ದಾಣದಲ್ಲಿ ಲಕ್ಷಗಟ್ಟಲೆ ಹಣ ಕಟ್ಟಿ ಮಳಿಗೆಗಳನ್ನು ಬಾಡಿಗೆ ಪಡೆದವರು ಕೋವಿಡ್ನಿಂದಾಗಿ ಆರ್ಥಿಕ ಸಂಕಷ್ಟದಲ್ಲಿ ನಲಗುವಂತಾಗಿದ್ದು, ವ್ಯಾಪಾರ ವಹಿವಾಟುಗಳಿಲ್ಲದೆ ಇಂದು ಅಂಗಡಿಗಳಿಗೆ ಸ್ವಯಂ ಪ್ರೇರಿತವಾಗಿ ಬೀಗ ಜಡಿದಿದ್ದಾರೆ.
ವಿಜಯಪುರ ಬಸ್ ನಿಲ್ದಾಣದಲ್ಲಿ ವ್ಯಾಪಾರವಿಲ್ಲದೇ ಅಂಗಡಿಗಳು ಬಂದ್: ಬಾಡಿಗೆ ಮನ್ನಾಕ್ಕೆ ಮನವಿ
ವಿಜಯಪುರದಲ್ಲಿ ಲಾಕ್‌ಡೌನ್ ಸಡಿಲಿಕೆ ಬಳಿಕವೂ ಜನರು ಹೆಚ್ಚಾಗಿ ಬಸ್ ಪ್ರಯಾಣ ಮಾಡುತ್ತಿಲ್ಲ. ಹೀಗಾಗಿ ಕೇಂದ್ರ ಬಸ್ ನಿಲ್ದಾಣದ ಅಂಗಡಿದಾರರ ವ್ಯಾಪಾರಕ್ಕೆ ಕೊಕ್ಕೆ ಬಿದ್ದಂತಾಗಿದೆ. ಇದರಿಂದ ಇನ್ನೂ 6 ತಿಂಗಳು ಮಳಿಗೆಗಳ ಬಾಡಿಗೆ ಮನ್ನಾ ಮಾಡಬೇಕು ಎಂದು ವ್ಯಾಪಾರಿಗಳು ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡಿದ್ದಾರೆ.
ಲಾಕ್‌ಡೌನ್ ಸಡಿಲಿಕೆ ಬಳಿಕವೂ ಜನರು ಹೆಚ್ಚಾಗಿ ಬಸ್ ಪ್ರಯಾಣ ಮಾಡುತ್ತಿಲ್ಲ. ಹೀಗಾಗಿ ಕೇಂದ್ರ ಬಸ್ ನಿಲ್ದಾಣದ ಅಂಗಡಿದಾರರ ವ್ಯಾಪಾರಕ್ಕೆ ಕೊಕ್ಕೆ ಬಿದ್ದಂತಾಗಿದೆ. ಇದರಿಂದ ಇನ್ನೂ 6 ತಿಂಗಳು ಮಳಿಗೆಗಳ ಬಾಡಿಗೆ ಮನ್ನಾ ಮಾಡಬೇಕು ಎನ್ನುವ ಒತ್ತಾಯ ಅಂಗಡಿ ಮಾಲೀಕರಿಂದ ಬಲವಾಗಿ ಕೇಳಿ ಬರುತ್ತಿದೆ. ಲಾಕ್‌ಡೌನ್ ಅವಧಿಯಲ್ಲಿ 3 ತಿಂಗಳ ಬಾಡಿಗೆ ಈಗಾಗಲೇ ಮನ್ನಾ ಮಾಡಲಾಗಿದೆಯಂತೆ. ಮಳಿಗೆಗಳು ಪುನಃ ಆರಂಭಗೊಂಡ ಬಳಿಕ ಒಟ್ಟು ಬಾಡಿಗೆಯಲ್ಲಿ ಶೇ 20ರಷ್ಟು ಮಾತ್ರ ಸಾರಿಗೆ ಅಧಿಕಾರಿಗಳು ಬಾಡಿಗೆ ಬರೆಸಿ ಎಂದಿದ್ದರು. ಆದರೆ ನಿರೀಕ್ಷೆಗೆ ತಕ್ಕ ವ್ಯಾಪಾರ ನಡೆಯದೆ ಇಂದು ಅಂಗಡಿಗಳಿಗೆ ಸ್ವಯಂ ಪ್ರೇರಿತವಾಗಿ ಬೀಗ ಹಾಕಿದ್ದಾರೆ.
ವಿಜಯಪುರ ಕೇಂದ್ರ ಬಸ್ ನಿಲ್ದಾಣದಲ್ಲಿ ಒಟ್ಟು 36 ಅಂಗಡಿ ಮಳಿಗೆ ಹಾಗೂ ಒಂದು ಹೋಟೆಲ್ ಇದೆ. ಪ್ರತಿ ತಿಂಗಳು ತಲಾ ಒಂದು ಮಳಿಗೆ 30 ಸಾವಿರಕ್ಕೂ ಅಧಿಕ ಬಾಡಿಗೆ ನೀಡುತ್ತಿದೆ. ಇನ್ನೂ ಹೊಟೇಲ್ ಬಾಡಿಗೆ ಸೇರಿದಂತೆ ಇತರೆ ಅಂಗಡಿಗಳಿಂದ ಪ್ರತಿ ತಿಂಗಳು ಸಾರಿಗೆ ಇಲಾಖೆಗೆ 20 ಲಕ್ಷಕ್ಕೂ ಅಧಿಕ ಬಾಡಿಗೆ ಹಣ ಬರುತ್ತಿತ್ತು. ಆದರೆ ವ್ಯಾಪಾರವಿಲ್ಲದ ಈ ಕಷ್ಟದ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ನಮಗೆ ನೆರವಾಗುವಂತೆ ವ್ಯಾಪಾರಿಗಳು ಮನವಿ ಮಾಡಿಕೊಂಡಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳನ್ನು ಕೇಳಿದರೆ ಮಳಿಗೆ ಬಾಡಿಗೆ ಮನ್ನಾ ಮಾಡುವುದು ಸಾರಿಗೆ ಇಲಾಖೆ ಎಂ.ಡಿ. ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ಅವರು ಅಲ್ಲಿಗೆ ಮನವಿ ಸಲ್ಲಿಸಲಿ, ನಾನು ಕೂಡ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡುವೆ ಎಂದಿದ್ದಾರೆ.