ಮುದ್ದೇಬಿಹಾಳ:ಶಿವಾಜಿ ಜಯಂತಿ ಆಚರಣೆ ಕುರಿತ ಪೂರ್ವಭಾವಿ ಸಭೆಯಲ್ಲಿ ತಾಲೂಕು ಆಡಳಿತದ ಅಧಿಕಾರಿಗಳು ಹಾಗೂ ಮರಾಠಿ ಸಮಾಜದ ಮುಖಂಡರ ನಡುವೆ ಜಟಾಪಟಿ ನಡೆಯಿತು.
ಶಿವಾಜಿ ಜಯಂತಿ ಪೂರ್ವಭಾವಿ ಸಭೆಯಲ್ಲಿ ಮಾತಿನ ಜಟಾಪಟಿ! - ಮುದ್ದೇಬಿಹಾಳ ತಹಶೀಲ್ದಾರ್ ಕಚೇರಿ
ಮುದ್ದೇಬಿಹಾಳ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಶಿವಾಜಿ, ಸವಿತಾ ಮಹರ್ಷಿ ಹಾಗೂ ಸರ್ವಜ್ಞ ಜಯಂತಿ ಆಚರಣೆ ಸಂಬಂಧ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ತಾಲೂಕು ಆಡಳಿತದ ಅಧಿಕಾರಿಗಳು ಹಾಗೂ ಮರಾಠಿ ಸಮಾಜದವರ ನಡುವೆ ಮಾತಿನ ಜಟಾಪಟಿ ನಡೆಯಿತು.
ಮುದ್ದೇಬಿಹಾಳ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಶಿವಾಜಿ, ಸವಿತಾ ಮಹರ್ಷಿ ಹಾಗೂ ಸರ್ವಜ್ಞ ಜಯಂತಿ ಆಚರಣೆ ಸಂಬಂಧ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ತಾಲೂಕು ಆಡಳಿತದ ಅಧಿಕಾರಿಗಳು, ನಮ್ಮನ್ನು ಸಭೆಗೆ ಆಹ್ವಾನಿಸಿ ಗೌರವ ತೋರದೇ ಅವಮಾನಿಸಿದ್ದಾರೆ ಎಂದು ಮರಾಠಿ ಸಮಾಜದವರು ಆರೋಪಿಸಿದರು. ಈ ವೇಳೆ, ಇಬ್ಬರ ನಡುವೆ ಮಾತಿನ ಜಟಾಪಟಿ ನಡೆದಿದ್ದು, ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಗ್ರೇಡ್-2 ತಹಶೀಲ್ದಾರ್ ಡಿ.ಜಿ.ಕಳ್ಳಿಮನಿ ಸಭೆಯನ್ನು ಮುಂದೂಡಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮರಾಠಿ ಸಮಾಜದ ಅಧ್ಯಕ್ಷ ರಾವಸಾಹೇಬ್ ದೇಸಾಯಿ ಹಾಗೂ ಮುಖಂಡ ಉದಯ ರಾಯಚೂರು, ರಾಷ್ಟ್ರೀಯತೆಯ ಭಾವನೆಯನ್ನು ಇಮ್ಮಡಿಗೊಳಿಸುವ ಮಹಾನ್ ಸಂತರು, ಶರಣರು, ಹೋರಾಟಗಾರರ ಜಯಂತಿ ಕಾರ್ಯಕ್ರಮಗಳಿಗೆ ಅಗೌರವ ತೋರುವ ಕೆಟ್ಟ ಪದ್ಧತಿಯನ್ನು ತಾಲೂಕು ಆಡಳಿತದ ಅಧಿಕಾರಿಗಳು ಮಾಡುತ್ತಿದ್ದಾರೆ. ಕೂಡಲೇ ಅಂತಹ ಬೇಜವಾಬ್ದಾರಿತನ ತೋರುವ ಅಧಿಕಾರಿಗಳು, ಸಿಬ್ಬಂದಿ ಮೇಲೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.