ಕರ್ನಾಟಕ

karnataka

ಗುಮ್ಮಟನಗರಿಯ ರಸ್ತೆಗಳ ಮೇಲೆ ಚರಂಡಿ ನೀರು, ಸ್ಥಳೀಯರ ಆಕ್ರೋಶ

ದಿನದ 24 ಗಂಟೆಗಳ ಕಾಲ ರಸ್ತೆ ಮೇಲೆ ಚರಂಡಿ ನೀರು ಹರಿಯುತ್ತಿದ್ದರೂ ಸಹ ಬಡವಾಣೆ ನಿವಾಸಿಗಳು ಮಹಾನಗರ ಪಾಲಿಕೆ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ..

By

Published : Sep 27, 2020, 8:10 PM IST

Published : Sep 27, 2020, 8:10 PM IST

Updated : Sep 27, 2020, 11:39 PM IST

Sewage water on road in Vijayapura
ಗುಮ್ಮಟನಗರಿಯಲ್ಲಿ ರಸ್ತೆಗೆ ಹರಿಯುತ್ತಿರುವ ಚರಂಡಿ ನೀರು

ವಿಜಯಪುರ :ಇಲ್ಲಿನ ಶಾಸ್ತ್ರಿ ನಗರದಲ್ಲಿ ಕಳೆದ ಹಲವು ತಿಂಗಳಿಂದ ವಾರ್ಡ್​ ನಂಬರ್ 33 ಹಾಗೂ 34ರಲ್ಲಿ ಚರಂಡಿ ಒಡೆದು ಹಲವು ತಿಂಗಳಿಂದ ಕೊಳಚೆ ನೀರು ರಸ್ತೆ ಮೇಲೆ ನುಗ್ಗುತ್ತಿರುವುರಿಂದ ಸುಮಾರು 2000ಕ್ಕೂ ಅಧಿಕ ಕುಟುಂಬಗಳಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.

ಗುಮ್ಮಟನಗರಿಯ ರಸ್ತೆಗಳ ಮೇಲೆ ಚರಂಡಿ ನೀರು

ಮುಖ್ಯ ರಸ್ತೆಯಲ್ಲಿ ಚರಂಡಿ ಪೈಪ್‌ಲೈನ್ ಒಡೆದಿದೆ. ಹೀಗಾಗಿ, ದಿನದ 24 ಗಂಟೆಗಳ ಕಾಲ ರಸ್ತೆ ಮೇಲೆ ಚರಂಡಿ ನೀರು ಹರಿಯುತ್ತಿದ್ದರೂ ಸಹ ಬಡವಾಣೆ ನಿವಾಸಿಗಳು ಮಹಾನಗರ ಪಾಲಿಕೆ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಸಂಬಂಧಿಸಿದ ಜನಪ್ರತಿನಿಧಿಗಳಿಗೆ ಹಾಗೂ ಪಾಲಿಕೆ ಅಧಿಕಾರಿಗಳಿಗೆ ಸರಿಪಡಿಸುವಂತೆ ಇಲ್ಲಿನ ನಿವಾಸಿಗಳು ಮನವಿ ಮಾಡಿದರೂ ಸಹ ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Last Updated : Sep 27, 2020, 11:39 PM IST

ABOUT THE AUTHOR

...view details