ಕರ್ನಾಟಕ

karnataka

ETV Bharat / state

ತೊಗರಿ ರಾಶಿಗೆ ಬೆಂಕಿ ಇಟ್ಟ ಖದೀಮರು: ನಂದಿಸಲು ನೀರು ಸಿಗದಂತೆ ಕೊಳವೆಬಾವಿ ಕೇಬಲ್​ ಕಿತ್ತ ಕೀಚಕರು - Set fire to farmer's bark crop

ರೈತನ ತೊಗರಿ ರಾಶಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ, ಅಪಾರ ಪ್ರಮಾಣದ ಬೆಳೆ‌ ನಾಶಪಡಿಸಿರುವ ಘಟನೆ ಇಂಡಿ ತಾಲೂಕಿನ ಪಡನೂರ ಗ್ರಾಮದಲ್ಲಿ ನಡೆದಿದೆ.

set-fire-to-farmers-bark-crop-in-vijayapura
ರೈತನ ತೊಗರಿ ರಾಶಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

By

Published : Jan 25, 2021, 10:01 AM IST

ವಿಜಯಪುರ: ತೊಗರಿ ರಾಶಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ‌ ಅಪಾರ ಪ್ರಮಾಣದ ಬೆಳೆ‌ ಸುಟ್ಟು ಕರಕಲಾದ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಪಡನೂರ ಗ್ರಾಮದಲ್ಲಿ ನಡೆದಿದೆ.

ರೈತನ ತೊಗರಿ ರಾಶಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

ಪಡನೂರ ಗ್ರಾಮದ ಮಲ್ಲು ಅವರಾದಿ ಎಂಬುವರು ತಮ್ಮ ಹೊಲದಲ್ಲಿ 35 ರಿಂದ 40 ಕ್ವಿಂಟಾಲ್​ನಷ್ಟು ತೊಗರಿ ಬೆಳೆ ಸಂಗ್ರಹಿಸಿದ್ದರು. ಈ ತೊಗರಿ ರಾಶಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ, ನಂದಿಸಲು ನೀರು ಸಿಗಬಾರದೆಂದು ಹೊಲದಲ್ಲಿದ್ದ ಕೊಳವೆ ಬಾವಿ ಕೇಬಲ್ ಕತ್ತರಿಸಿ ಹೊತ್ತೊಯ್ದಿದ್ದಾರೆ.

ಓದಿ:ಮೂಢನಂಬಿಕೆಗೆ ಬಲಿಯಾದ ವಿದ್ಯಾವಂತ ಪೋಷಕರು.. ಮತ್ತೆ ಹುಟ್ಟಿ ಬರುತ್ತಾರೆಂದು ಕರುಳಕುಡಿಗಳನ್ನೇ ಕೊಂದರೇ!

ಹಳೆ ವೈಷಮ್ಯದ ಹಿನ್ನೆಲೆ, ತೊಗರಿ ರಾಶಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ ಎಂಬ ಶಂಕೆ ಗ್ರಾಮದಲ್ಲಿ ವ್ಯಕ್ತವಾಗಿದೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದು, ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details