ಕರ್ನಾಟಕ

karnataka

ETV Bharat / state

ಪ್ರವಾಹ ಸಂತ್ರಸ್ತರಿಗೆ ಹೆದರಿ ಅಧಿವೇಶನ ಬೆಂಗಳೂರಿಗೆ ಸ್ಥಳಾಂತರ.. ಎಂ ಬಿ ಪಾಟೀಲ್ ವ್ಯಂಗ್ಯ - ಸರ್ಕಾರ 3 ತಿಂಗಳು ಸಹ ಉಳಿಯುವುದಿಲ್ಲ

ವಿಜಯಪುರದಲ್ಲಿ ಮಾತನಾಡಿದ ಮಾಜಿ ಸಚಿವ ಎಂ ಬಿ ಪಾಟೀಲ್​​ ಅವರು ಪ್ರವಾಹ ಸಂತ್ರಸ್ತರಿಗೆ ಹೆದರಿ ಅಧಿವೇಶನ ಬೆಂಗಳೂರಿಗೆ ಸ್ಥಳಾಂತರ ಮಾಡಿರುವುದು ಸಂತ್ರಸ್ತರಿಗೆ ಮಾಡಿದ ದ್ರೋಹವಾಗಿದೆ. ಈ ಸರ್ಕಾರ ಗೊತ್ತು ಗುರಿ ಇಲ್ಲದೇ ಸಾಗುತ್ತಿದೆ. ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಹೀಗೆ ಆದರೆ ಸರ್ಕಾರ 3 ತಿಂಗಳು ಸಹ ಉಳಿಯುವುದಿಲ್ಲ ಎಂದಿದ್ದಾರೆ.

ಎಂ.ಬಿ. ಪಾಟೀಲ್

By

Published : Sep 20, 2019, 2:07 PM IST

ವಿಜಯಪುರ: ರಾಜ್ಯ ಸರ್ಕಾರ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸಬೇಕಾಗಿತ್ತು.ಆದರೆ, ಪ್ರವಾಹ ಸಂತ್ರಸ್ತರಿಗೆ ಹೆದರಿ ಅಧಿವೇಶನ ಬೆಂಗಳೂರಿಗೆ ಸ್ಥಳಾಂತರ ಮಾಡಿರುವುದು ಸಂತ್ರಸ್ತರಿಗೆ ಮಾಡಿದ ದ್ರೋಹವಾಗಿದೆ ಎಂದು ಮಾಜಿ ಸಚಿವ ಎಂ ಬಿ ಪಾಟೀಲ್​​ ಕಿಡಿಕಾರಿದ್ದಾರೆ.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹದಿಂದ ಉತ್ತರ ಕರ್ನಾಟಕದ ಜನ ತತ್ತರಿಸಿ ಹೋಗಿದ್ದಾರೆ. ಮನೆ-ಮಠ, ಆಸ್ತಿ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಈ ಪರಿಸ್ಥಿತಿಯಲ್ಲಿ ಬೆಳಗಾವಿಯಲ್ಲಿ ಅಧಿವೇಶನ ನಡೆಸಿ, ಸಂತ್ರಸ್ತರಿಗೆ ಧೈರ್ಯ ತುಂಬುವ ಕೆಲಸವಾಗಬೇಕಾಗಿತ್ತು. ಅದು ಬಿಟ್ಡು ಸಂತ್ರಸ್ತರು ಪ್ರತಿಭಟನೆ ಮಾಡುತ್ತಾರೆ ಎನ್ನುವ ಭಯದಲ್ಲಿ ಅಧಿವೇಶನ ಬೆಂಗಳೂರಿಗೆ ಸ್ಥಳಾಂತರ ಮಾಡಿದ್ದು ಸರಿಯಾದ ಕ್ರಮವಲ್ಲ ಎಂದರು.

ಸರ್ಕಾರ 3 ತಿಂಗಳು ಸಹ ಉಳಿಯುವುದಿಲ್ಲ.. ಮಾಜಿ ಸಚಿವ ಎಂ ಬಿ ಪಾಟೀಲ್

ಸಿಎಂ ಯಡಿಯೂರಪ್ಪ ಅಧಿಕಾರ ವಹಿಸಿಕೊಳ್ಳುವಾಗ ದ್ವೇಷ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿ, ಈಗ ಕಾಂಗ್ರೆಸ್ ಶಾಸಕರ ಕ್ಷೇತ್ರಗಳ ಅನುದಾನ ತಡೆಹಿಡಿಯುತ್ತಿದ್ದಾರೆ. ತನ್ನ ಕ್ಷೇತ್ರದ ಅನುದಾನ ಸಹ ತಡೆಹಿಡಿದಿದ್ದಾರೆ ಎಂದು ಆರೋಪಿಸಿದರು.

ಈ ಸರ್ಕಾರ ಗೊತ್ತು ಗುರಿ ಇಲ್ಲದೇ ಸಾಗುತ್ತಿದೆ. ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಹೀಗೆ ಆದರೆ ಸರ್ಕಾರ 3 ತಿಂಗಳು ಸಹ ಉಳಿಯುವುದಿಲ್ಲ. ಕೋಡಿಮಠದ ಶ್ರೀಗಳು ಹೇಳಿದ ಭವಿಷ್ಯ ನಿಜವಾಗಬಹುದೇನೋ ಎಂದು ಮಾರ್ಮಿಕವಾಗಿ ನುಡಿದರು.

ABOUT THE AUTHOR

...view details