ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ತಾಂಬಾ ಗ್ರಾಮದಲ್ಲಿ ಕಳ್ಳರು ಕೈಚಳಕ ತೋರಿದ್ದು, ಸರಣಿಗಳ್ಳತನ ಮಾಡಿ ಪರಾರಿಯಾಗಿದ್ದಾರೆ.
ವಿಜಯಪುರದಲ್ಲಿ ಸರಣಿಗಳ್ಳತನ : ಅಂಗಡಿ ಮನೆಗಳನ್ನು ದೋಚಿರುವ ಖದೀಮರು! - ವಿಜಯಪುರದಲ್ಲಿ ಸರಣಿಗಳ್ಳತನ
ವಿಜಯಪುರ ಜಿಲ್ಲೆಯಲ್ಲಿ ಕಳ್ಳರು ತಮ್ಮ ಕೈಚಳಕ ತೋರಿದ್ದು, ಸರಣಿಗಳ್ಳತನ ಮಾಡಿ ಪರಾರಿಯಾಗಿದ್ದಾರೆ.
ವಿಜಯಪುರದಲ್ಲಿ ಸರಣಿಗಳ್ಳತನ,ಅಂಗಡಿ ಮನೆಗಳನ್ನು ದೋಚಿರುವ ಖದೀಮರು!
ಒಂದೆ ರಾತ್ರಿ ಜ್ಯುವೆಲ್ಲರಿ ಶಾಪ್, ಪೋಸ್ಟ್ ಆಫೀಸ್ ಹಾಗೂ 10ಕ್ಕೂ ಹೆಚ್ಚು ಮನೆಗಳ ಚಿನ್ನಾಭರಣ ಮತ್ತು ನಗದು ದೋಚಿದ್ದಾರೆ. ಅಂಗಡಿಯಲ್ಲಿನ ಸಿಸಿ ಕ್ಯಾಮೆರಾ ಒಡೆದಿರುವ ಕಳ್ಳರು ತಮ್ಮ ಗುರುತು ಸಿಗದಂತೆ ಕೃತ್ಯವೆಸಗಿದ್ದಾರೆ.
ಇನ್ನು ಎಷ್ಟು ಹಣ, ಚಿನ್ನಾಭರಣ ಕಳ್ಳತನವಾಗಿದೆ ಎಂಬುದು ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ. ಈ ಕುರಿತು ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.