ವಿಜಯಪುರ: ಹಳ್ಳಿಗಳಿಗೆ ಪಶು ವೈದ್ಯರು ಹೋಗುತ್ತಿಲ್ಲ ಎನ್ನುವ ದೂರುಗಳು ಬರುತ್ತಿರುವ ಹಿನ್ನೆಲೆ ರೈತರಿಗಾಗಿ ವಾರ್ ರೂಂ ಆರಂಭಿಸಲಾಗುತ್ತಿದೆ. ರೈತರು ಇಲ್ಲಿಗೆ ಕರೆ ಮಾಡಿದರೆ ಪಶು ವೈದ್ಯರ ಸೌಲಭ್ಯ ಮಾಡಿಕೊಡಲಾಗುವುದು ಎಂದು ಪಶು ಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ತಿಳಿಸಿದರು.
ಪಶುಗಳ ಆರೋಗ್ಯಕ್ಕಾಗಿ ಪ್ರತ್ಯೇಕ ವಾರ್ ರೂಂ ಆರಂಭಿಸುತ್ತೇವೆ: ಸಚಿವ ಪ್ರಭು ಚೌವ್ಹಾಣ್ - ಕರ್ನಾಟದಕಲ್ಲಿ ಪಶುಗಳ ಆರೋಗ್ಯಕ್ಕಾಗಿ ವಾರ್ ರೂಂ '
ದಿನದ 24 ಗಂಟೆ ಪಶು ವೈದ್ಯರು ಲಭ್ಯವಾಗುವ ರೀತಿ ರೈತರಿಗಾಗಿ ವಾರ್ ರೂಂ ಆರಂಭಿಸಲಾಗುತ್ತದೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ತಿಳಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ರಾಜ್ಯದ 15 ಜಿಲ್ಲೆಯಲ್ಲಿ ಪಶು ಸಂಜೀವಿನಿ ಯೋಜನೆ, ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯನ್ನು ಸ್ಥಾಪಿಸಲಾಗಿದೆ. ವಾರ್ ರೂಂ ಮೂಲಕ ಪ್ರತಿ ರೈತರ ಜಾನುವಾರುಗಳ ಆರೋಗ್ಯ ಕಾಪಾಡಬಹುದಾಗಿದೆ. ದಿನದ 24 ಗಂಟೆ ಪಶು ವೈದ್ಯರು ಲಭ್ಯವಾಗುವ ರೀತಿ ಕ್ರಮ ಕೈಗೊಳ್ಳಲಾಗುವುದು. ಕೇವಲ ವಾರ್ ರೂಂಗೆ ಕರೆ ಮಾಡಿದರೆ ಸಾಕು, ನಿಮ್ಮ ಬಳಿಯೇ ವೈದ್ಯರು ಬಂದು ಪಶುಗಳ ಆರೋಗ್ಯ ನೋಡಿಕೊಳ್ಳಲಿದ್ದಾರೆ. ನಂತರ ಮಾಹಿತಿಯನ್ನ ಆಯುಕ್ತರಿಗೆ ನೀಡಲಿದ್ದಾರೆ ಎಂದರು.
ಗೋ ಹತ್ಯೆ ನಿಷೇಧ:ಮುಂದಿನ ಅಧಿವೇಶನದಲ್ಲಿ ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಮಾಡಲಾಗುತ್ತದೆ. ಇದಕ್ಕೆ ಯಾವುದೇ ಅಡ್ಡಿಯುಂಟಾಗದಂತೆ ನೋಡಿಕೊಳ್ಳಲಾಗುತ್ತದೆ ಎಂದರು. ಮರಾಠ ಹಾಗೂ ವೀರಶೈವ-ಲಿಂಗಾಯತ ಪ್ರಾಧಿಕಾರ ರಚನೆ ಆದೇಶವನ್ನು ಸ್ವಾಗತಿಸಿದ ಅವರು, ಈ ಮೂಲಕ ಎಲ್ಲಾ ಸಮುದಾಯದವರ ಅಭಿವೃದ್ಧಿಗೆ ಸಿಎಂ ಬಿಎಎಸ್ವೈ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.