ಕರ್ನಾಟಕ

karnataka

ETV Bharat / state

ಒಂದಲ್ಲ ಎರಡಲ್ಲ ಮೂರನೇ ಬಾರಿ ಮಾತಾಡ್ತಿರೋದು ಸರ್​....ಎಂಬಿಪಿ ಗರಂ ಆಗಿದ್ದು ಯಾರ ವಿರುದ್ಧ!!

ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರದಲ್ಲಿ ಕಾಂಗ್ರೆಸ್ ತಪ್ಪು ಹೆಜ್ಜೆ ಇಟ್ಟಿದೆ, ತಕ್ಣಣ ಕ್ಷಮಾಪಣೆ ಕೇಳಬೇಕೆಂದ ಡಿಕೆಶಿ ಹೇಳಿಕೆ ವಿರುದ್ಧ ಗೃಹ ಸಚಿವ ಎಂ‌.ಬಿ.ಪಾಟೀಲ್ ಗರಂ ಆದರು. ಇನ್ನು ಹೈಕಮಾಂಡಗೆ ದೂರು ನೀಡುವ ಎಚ್ಚರಿಕೆ ಸಹ ನೀಡಿದರು

ಎಂ‌.ಬಿ.ಪಾಟೀಲ್

By

Published : Apr 12, 2019, 7:52 PM IST

ವಿಜಯಪುರ: ಪದೇ ಪದೆ ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರ ಪ್ರಸ್ತಾಪಿಸುತ್ತಿರುವ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್​ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಗೃಹ ಸಚಿವ ಎಂ‌.ಬಿ.ಪಾಟೀಲ್​ ಡಿಕೆಶಿ ವಿರುದ್ಧ ಹೈಕಮಾಂಡಗೆ ದೂರು ನೀಡುವುದಾಗಿ ಗುಡುಗಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರದಲ್ಲಿ ಕಾಂಗ್ರೆಸ್ ತಪ್ಪು ಹೆಜ್ಜೆ ಇಟ್ಟಿದೆ, ತಕ್ಷಣ ಕ್ಷಮಾಪಣೆ ಕೇಳಬೇಕೆಂದು ಇದು ಮೂರನೇ ಬಾರಿ ಹೇಳಿಕೆ ನೀಡುತ್ತಿರುವುದು. ಇದರ ಹಿಂದೆ ದುರುದ್ದೇಶವಿದೆ, ಅದು ಏನು ಅನ್ನುವದು ತಮಗೂ ತಿಳಿದಿದೆ‌. ಚುನಾವಣೆ ಮುಗಿಯಲಿ, ಪ್ರತ್ಯೇಕ ಸುದ್ದಿಗೋಷ್ಠಿ ನಡೆಸಿ ಅವರ ಬಂಡವಾಳ ಹೊರಗೆ ಹಾಕುವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉತ್ತರ ಕರ್ನಾಟಕ ನಾಯಕರ ಮೇಲೆ ಏಕೆ ದಾಳಿ ಮಾಡುತ್ತಿದ್ದಾರೆ? ಲಿಂಗಾಯತ ಧರ್ಮವನ್ನು ಪದೇ ಪದೆ ಏಕೆ ಕೆಣಕುತ್ತಿದ್ದಾರೆ? ಈ ಬಗ್ಗೆ ಕೇಳಿದರೆ ನಾನೊಬ್ಬ ಪಕ್ಷದ ಸಾಮಾನ್ಯ ಕಾರ್ಯಕರ್ತ ಎಂದು ಹೇಳುತ್ತಾರೆ. ಹಾಗಿದ್ದರೆ ಲಿಂಗಾಯತ ಧರ್ಮ ವಿಚಾರವಾಗಿ ಹೇಳಿಕೆ ನೀಡಲು ಅನುಮತಿ ಕೊಟ್ಟವರಾರು, ನೀವೇನು ಕೆಪಿಸಿಸಿ ಅಧ್ಯಕ್ಷರಾ? ಇಲ್ಲ ಎಐಸಿಸಿ ಅಧ್ಯಕ್ಷರಾ? ಎಂದು ಖಾರವಾಗಿ ತರಾಟೆಗೆ ತೆಗೆದುಕೊಂಡರು.

ಗೃಹ ಸಚಿವ ಎಂ‌.ಬಿ.ಪಾಟೀಲ್​

ಮೊದಲು ಒಕ್ಕಲಿಗರ ಬೆಲ್ಟ್​ನಲ್ಲಿ ಕಾಂಗ್ರೆಸ್​ಗೆ ಏಕೆ ಕಡಿಮೆ ಮತ ಬಿದ್ದಿವೆ ಅದನ್ನು ನೋಡಿಕೊಳ್ಳಿ. ನಿಮ್ಮ ಮನೆಯನ್ನು ಮೊದಲು ಕಾಪಾಡಿಕೊಳ್ಳಿ, ಆ ಮೇಲೆ ಬೇರೆಯವರ ಮನೆ ನೋಡಿ ಎಂದು ಡಿಕೆಶಿಗೆ ಬುದ್ದಿ ಮಾತು ಹೇಳಿದರು.

ಸಚಿವ ಡಿಕೆಶಿ ಈ ರೀತಿ ಹೇಳಿಕೆ ನೀಡುವುದರ ಉದ್ದೇಶ ಬೇರೆ ಇದೆ, ಕೆಲವರ ಹಿತ ಕಾಪಾಡಲು ಅವರು ಯಾವ ಮಟ್ಟಕ್ಕೆ ಇಳಿದಿದ್ದಾರೆ ಎನ್ನುವದು ಗೊತ್ತಿದೆ. ಚುನಾವಣೆ ನಂತರ ಎಲ್ಲ ಸತ್ಯಾಂಶ ಬಹಿರಂಗ ಪಡಿಸುತ್ತೇನೆ, ಇದಕ್ಕೆ ಹೈ ಕಮಾಂಡ್​ ಮಧ್ಯೆ ಪ್ರವೇಶಿಸಿದರೂ ನಾನು ಕೇರ್​ ಮಾಡುವುದಿಲ್ಲ ಎಂದರು.

For All Latest Updates

TAGGED:

ABOUT THE AUTHOR

...view details