ಕರ್ನಾಟಕ

karnataka

ETV Bharat / state

ಕೊರೊನಾ ತಡೆಯಲು ಸೆನ್ಸಾರ್ ಸ್ಯಾನಿಟೈಸರ್ ಯಂತ್ರ ಆವಿಷ್ಕಾರ: ವಿಜಯಪುರದ ವಿದ್ಯಾರ್ಥಿ ಸಾಧನೆ - ವಿಜಯಪುರದಲ್ಲಿ ಕೊರೊನಾ ಪ್ರಕರಣ

ಕೊರೊನಾ ವೈರಸ್‌ನಿಂದ ದೇಶವೇ ತತ್ತರಿಸಿದೆ. ಇದರಿಂದ ದೂರವಿರಲು ಸ್ಯಾನಿಟೈಸರ್ ಬಳಕೆ ಮಾಡಲಾಗುತ್ತಿದೆ. ಆದರೆ ಸ್ಯಾನಿಟೈಸರ್ ಬಾಟಲ್ ಮುಟ್ಟಿ ಜನ ಕೈ ತೊಳೆಯುತ್ತಿರುವ ಕಾರಣ ಕೊರೊನಾ ಹರಡಬಹುದು ಎಂಬ ಕಾರಣದಿಂದ ಇಲ್ಲೊಬ್ಬ ವಿದ್ಯಾರ್ಥಿ ಯಂತ್ರವನ್ನು ಕಂಡು ಹಿಡಿದಿದ್ದಾನೆ.

dsdd
ಕೊರೊನಾ ತಡೆಯಲು ಸೆನ್ಸಾರ್ ಸ್ಯಾನಿಟೈಸರ್ ಯಂತ್

By

Published : May 22, 2020, 4:01 PM IST

ವಿಜಯಪುರ: ಸ್ಯಾನಿಟೈಸರ್ ಬಾಟಲ್ ಮುಟ್ಟಿ ಜನ ಕೈ ತೊಳೆಯುತ್ತಿರುವ ಕಾರಣ ಕೊರೊನಾ ಹರಡಬಹುದು ಎಂದು ಮನಗಂಡ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಸೆನ್ಸಾರ್ ಸ್ಯಾನಿಟೈಸರ್ ಸಿಂಪಡನೆ ಯಂತ್ರವನ್ನ ಸಂಶೋಧನೆ ಮಾಡಿದ್ದಾನೆ.

ಕೊರೊನಾ ತಡೆಯಲು ಸೆನ್ಸಾರ್ ಸ್ಯಾನಿಟೈಸರ್ ಯಂತ್ರ ಆವಿಷ್ಕಾರ: ವಿಜಯಪುರ ವಿದ್ಯಾರ್ಥಿ ಸಾಧನೆ

ಗುಮ್ಮಟ ನಗರಿಯ ಅಭಿಷೇಕ್ ಹಿಪ್ಪರಗಿ ಎಂಬ ಯುವಕ ಈ ಯಂತ್ರವನ್ನು ಸಂಶೋಧನೆ ಮಾಡಿದ್ದಾನೆ. ಸ್ಥಳೀಯವಾಗಿ ಸಿಗುವ ವಸ್ತುಗಳನ್ನ ಬಳಕೆ ಮಾಡಿಕೊಂಡು ಅಟೋಮ್ಯಾಟಿಕ್ ಸ್ಯಾನಿಟೈಸರ್ ಯಂತ್ರ ಸಂಶೋಧನೆ ಮಾಡಿದ್ದಾನೆ. ಈ ವಿದ್ಯಾರ್ಥಿ ಬಾಗಲಕೋಟೆಯ ಬಸವೇಶ್ವರ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದು, ಕೇವಲ 1 ಸಾವಿರ ರೂ. ವೆಚ್ಚದಲ್ಲಿ ಈ ಮಷಿನ್ ಕಂಡು ಹಿಡಿದಿದ್ದಾನೆ. ಕೊರೊನಾ ತುರ್ತು ಸಮಯದಲ್ಲಿ ಸಮಾಜಕ್ಕೆ ನನ್ನಿಂದ ಏನಾದ್ರೂ ಸಹಾಯವಾಗಲಿ ಅಂತಾ ಯಂತ್ರ ತಯಾರಿಸಿದ್ದೇನೆ ಎಂದು ಅಭಿಷೇಕ್​ ಹೇಳಿದ್ದಾನೆ.

ಯಂತ್ರವನ್ನು ಸರ್ಕಾರಿ ಕಚೇರಿಗಳು, ಸಾರ್ವಜನಿಕ ಸ್ಥಳಗಳಲ್ಲಿ ಬಳಕೆ ಮಾಡುವುರಿಂದ ಕೊರೊನಾ ವೈರಸ್ ತಡೆಯಬಹುದು. ಮನೆಯಲ್ಲಿ ಬಳಕೆ ಮಾಡುವ ಡಬ್ಬ, ಐಆರ್​ಎಲ್‌ಇಡಿ, ಐಸಿಎಲ್‌ಎಂ35 ಹಾಗೂ ಡಿಸಿ ಪಂಪ್ ಬಳಕೆ ಮಾಡಿಕೊಂಡು ಅಭಿಷೇಕ್​ ಈ ಸೆನ್ಸಾರ್ ಚಾಲಿತ ಸ್ಯಾನಿಟೈಸರ್ ಮಷಿನ್​ ತಯಾರಿಸಿದ್ದಾನೆ‌.

ABOUT THE AUTHOR

...view details