ಮುದ್ದೇಬಿಹಾಳ: ಗಣೇಶ ಚತುರ್ಥಿಯಂದೇ ತಾಲೂಕಿನ ನಾಲತವಾಡದಲ್ಲಿ ಸಮಾಜ ಸೇವಕರೊಬ್ಬರು ಸೆನ್ಸಾರ್ ಸ್ಯಾನಿಟೈಸರ್ ಯಂತ್ರವನ್ನು ಆಸ್ಪತ್ರೆಗೆ ಕೊಡುಗೆಯಾಗಿ ನೀಡಿದ್ದಾರೆ.
ನಾಲತವಾಡ ಆಸ್ಪತ್ರೆಗೆ ಸೆನ್ಸಾರ್ ಸ್ಯಾನಿಟೈಸರ್ ಮಷಿನ್ ಕೊಡುಗೆ - ಸೆನ್ಸಾರ್ ಸ್ಯಾನಿಟೈಸರ್ ಯಂತ್ರ
ನಾಲತವಾಡ ಸರ್ಕಾರಿ ಆಸ್ಪತ್ರೆಗೆ ಸಮಾಜ ಸೇವಕ ಗಿರೀಶಗೌಡ ಪಾಟೀಲ ಅವರು ಸೆನ್ಸಾರ್ ಸ್ಯಾನಿಟೈಸರ್ ಮಷಿನ್ ಅನ್ನು ಕೊಡುಗೆಯಾಗಿ ನೀಡಿದ್ದಾರೆ.
ಈ ಯಂತ್ರದ ಬುಡದಲ್ಲಿ ಕೈ ಚಾಚಿದರೆ ಸಾಕು ತನ್ನಿಂದ ತಾನೇ ಸ್ಯಾನಿಟೈಸರ್ ದ್ರಾವಣ ಕೈಯಲ್ಲಿ ಬೀಳುವ ವ್ಯವಸ್ಥೆ ಇದರಲ್ಲಿದೆ. ಇದರಿಂದ ಆಸ್ಪತ್ರೆಗೆ ಬರುವ ವೈದ್ಯರು, ರೋಗಿಗಳು, ಸಾರ್ವಜನಿಕರು, ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೂ ಅನುಕೂಲವಾಗಲಿದೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿರುವ ನಾಲತವಾಡ ಜಿ.ಪಿ. ಫೌಂಡೇಶನ್ ಅಧ್ಯಕ್ಷ ಗಿರೀಶಗೌಡ ಪಾಟೀಲ್, ಕೋವಿಡ್-19 ನಂತಹ ಈ ಸಂದರ್ಭದಲ್ಲಿ ಜನರ ಆರೋಗ್ಯ ದೃಷ್ಟಿಯಿಂದ ಹ್ಯಾಂಡ್ ಸ್ಯಾನಿಟೈಸರ್ ಯಂತ್ರದ ಅವಶ್ಯಕತೆ ಇದೆ. ಗಣೇಶ ಚತುರ್ಥಿಯ ಈ ಸಂದರ್ಭದಲ್ಲಿ ತಮ್ಮ ಅಭಿಮಾನಿ ಬಳಗದಿಂದ ಜನರಿಗೆ ಅನುಕೂಲವಾಗಲೆಂದು ಈ ಯಂತ್ರವನ್ನು ಅರ್ಪಿಸಿದ್ದೇವೆ ಎಂದು ಹೇಳಿದರು.