ಕರ್ನಾಟಕ

karnataka

ETV Bharat / state

ಅನಾರೋಗ್ಯದಿಂದ ಬಳಲುತ್ತಿದ್ದ ಪತ್ರಕರ್ತ ಸಾವು - Vijayapur journalist died

ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಪತ್ರಕರ್ತ ಜಾಫರ್ ಕಲಾದಗಿ ಇಂದು ನಿಧನರಾಗಿದ್ದಾರೆ.

ಪತ್ರಕರ್ತ
ಪತ್ರಕರ್ತ

By

Published : Apr 22, 2021, 10:10 PM IST

​​​​​​ವಿಜಯಪುರ: ನಗರದ ಪತ್ರಕರ್ತರೊಬ್ಬರು ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ.


ಜಾಫರ್ ಕಲಾದಗಿ(42) ಮೃತ ಪತ್ರಕರ್ತ. ಈತ ಹಲವು ದಿನಗಳಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಇದೇ ಕಾರಣಕ್ಕೆ ಕಳೆದ ಒಂದು ವಾರದ ಹಿಂದೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ನಿನ್ನೆ ಸಂಜೆ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ.

ಬಿಜಾಪುರ ಮಿರರ್ ಇಂಗ್ಲಿಷ್ ದಿನ ಪತ್ರಿಕೆಯನ್ನು ಜಾಫರ್ ಕಲಾದಗಿ ನಡೆಸುತ್ತಿದ್ದರು. ಇವರ ಸಾವಿಗೆ ಮಾಜಿ ಸಚಿವ ಎಂ.ಬಿ. ಪಾಟೀಲ ತೀವ್ರ ಸಂತಾಪ ಸೂಚಿಸಿದ್ದಾರೆ.

ABOUT THE AUTHOR

...view details