ವಿಜಯಪುರ: ಕೊರೊನಾ ಆತಂಕ ಹೆಚ್ಚಾಗುತ್ತಿದ್ದಂತೆ ಜಿಲ್ಲಾಡಳಿತ ಕೆಲವು ಪ್ರದೇಶಗಳನ್ನು ಸೀಲ್ಡೌನ್ ಮಾಡಿ, ಡ್ರೋನ್ ಕಣ್ಗಾವಲಿನಲ್ಲಿಟ್ಟಿದೆ.
ಡ್ರೋನ್ ಮೂಲಕ ಸೀಲ್ಡೌನ್ ಪ್ರದೇಶ ವೀಕ್ಷಣೆ
ವಿಜಯಪುರದಲ್ಲಿ ಕೊರೊನಾ ಆತಂಕ ಹೆಚ್ಚಾಗುತ್ತಿರುವ ಹಿನ್ನೆಲೆ, ಕೆಲವು ಪ್ರದೇಶಗಳನ್ನು ಸೀಲ್ಡೌನ್ ಮಾಡಲಾಗಿದೆ. ಡ್ರೋನ್ ಮೂಲಕ ಸಾರ್ವಜನಿಕ ಚಲನವಲನಗಳ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಸಿಲ್ ಡೌನ್ ಪ್ರದೇಶ ವೀಕ್ಷಣೆ
ನಗರದ ಬಡೆ ಕಮಾನ್, ಗೋಳ ಗುಮ್ಮಟ, ಚಪ್ಪರಬಂದ್ ಬಡಾವಣೆಗಳಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿ, ಸೀಲ್ಡೌನ್ ಏರಿಯಾಗಳಲ್ಲಿ ಡ್ರೋಣ್ ಕ್ಯಾಮರಾ ಇರಿಸಿದ್ದಾರೆ.
ಇನ್ನೂ ಸ್ಟೇಷನ್ ರಸ್ತೆಯಲ್ಲಿ ಡ್ರೋನ್ ಮೂಲಕ ಸಾರ್ವಜನಿಕ ಚಲನವಲನಗಳ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಸೀಲ್ಡೌನ್ ಮಾಡಿದ ಬದಲಾವಣೆಗಳ ಬಗ್ಗೆ ಎಸ್ಪಿ ಅನುಪಮ್ ಅಗರವಾಲ್ ಪರಿಶೀಲನೆ ನಡೆಸುತ್ತಿದ್ದಾರೆ.
Last Updated : Apr 12, 2020, 7:06 PM IST