ಮುದ್ದೇಬಿಹಾಳ:ಹೊಸ ಪ್ರತಿಭೆಗಳನ್ನಿಟ್ಟುಕೊಂಡು ಅನ್ನದಾತನ ಸಂಕಷ್ಟವನ್ನು ಕಿರುಚಿತ್ರದ ಮೂಲಕ ತೋರಿಸಲು ಮುಂದಾಗಿರುವ ಯುವಕರ ಕಾರ್ಯ ಶ್ಲಾಘನೀಯವಾದದು ಎಂದು ಭೂ ನ್ಯಾಯ ಮಂಡಳಿ ಸದಸ್ಯ ಎಸ್.ಬಿ.ಚಲವಾದಿ ಹೇಳಿದರು.
ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಣರಂಗ ಕಿರುಚಿತ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾವೆಲ್ಲ ಒಂದು ಹೊತ್ತಿನ ಊಟ ಮಾಡುತ್ತಿದ್ದೇವೆ ಎಂದರೆ ಅದಕ್ಕೆ ರೈತರು ಬೆವರು ಬಸಿದು ಬೆಳೆದ ಶ್ರಮವೇ ಕಾರಣ ಎಂದರು.