ವಿಜಯಪುರ:ಪರಿಸರ ದಿನ ಆಚರಣೆ ಮಾಡುತ್ತಿರುವ ಈ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಗೆ ಪರೋಕ್ಷವಾಗಿ ಕೊಡುಗೆ ನೀಡುವ ಸಸಿ ಮಾರಾಟಗಾರರ ಬದುಕು ಮಾತ್ರ ಸಂಕಷ್ಟಕ್ಕೆ ಸಿಲುಕಿದೆ.
ಹೌದು, ಕೋವಿಡ್ ಲಾಕ್ಡೌನ್ನಿಂದ ಜನ ಸಂಚಾರವಿಲ್ಲದೆ ಬೀದಿ ಬದಿಗಳಲ್ಲಿ ವಿವಿಧ ತಳಿಯ ಸಸಿಗಳನ್ನು ಮಾರಾಟ ಮಾಡಿ ಜೀವನ ನಡೆಸುವ ಜನರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಸಸಿ ಮಾರಾಟಗಾರರು ವಿಜಯಪುರ ನಗರದ ಸ್ಟೇಶನ್ ರಸ್ತೆಯಲ್ಲಿ ಆಂಧ್ರ ಪ್ರದೇಶ ಮೂಲದ 5-6 ಕುಟುಂಬಗಳು ಸಸಿಗಳನ್ನು ಮಾರಾಟ ಮಾಡಿ ಬದುಕು ಸಾಗಿಸುತ್ತಿವೆ. ಆದರೆ, ಕೋವಿಡ್ ಲಾಕ್ಡೌನ್ನಿಂದ ಇವರ ಸಸಿಗಳನ್ನು ಕೊಳ್ಳುವವರೇ ಇಲ್ಲದಂತಾಗಿದೆ. ಮಳೆಗಾಲ ಆಗಮಿಸಿದ್ದರಿಂದ ಸಸಿಗಳ ಮಾರಾಟಗಾರರಿಗೆ ಒಳ್ಳೆಯ ಸಂಪಾದನೆ ಆಗಬೇಕಿತ್ತು. ಆದರೆ ಲಾಕ್ಡೌನ್ನಿಂದ ಎಲ್ಲವೂ ಬಂದ್ ಆಗಿ, ಇವರ ಸಂಪಾದನೆಗೆ ಹೊಡೆತ ಬಿದ್ದಿದೆ. ಕೇರಳ, ತಮಿಳುನಾಡಿನಿಂದ ಸಸಿಗಳನ್ನು ತಂದು ಮಾರಾಟಕ್ಕಿಟ್ಟ ಈ ಕುಟುಂಬಗಳು ಊಟಕ್ಕೂ ಪರದಾಡುವಂತಾಗಿದೆ.
ಓದಿ : ಲಾಕ್ಡೌನ್ ಎಫೆಕ್ಟ್: ಸಂಕಷ್ಟದಲ್ಲಿ ಬೆಣ್ಣೆನಗರಿಯ ಹೂವಿನ ವ್ಯಾಪಾರಸ್ಥರು