ವಿಜಯಪುರ: ನಗರದಲ್ಲಿ 6 ಕೂರೊನಾ ಪಾಸಿಟಿವ್ ಪ್ರಕರಣ ದೃಢಪಟ್ಟ ಬೆನ್ನಲ್ಲೇ ಸೀಲ್ ಡೌನ್ ಪ್ರದೇಶಗಳಿಗೆ ಅಗ್ನಿಶಾಮಕ ದಳದಿಂದ ಸ್ಯಾನಿಟೈಸರ್ ಮಿಶ್ರಿತ ಔಷಧ ಸಿಂಪಡಣೆ ಮಾಡಲಾಯಿತು.
ಕೊರೊನಾ ಭೀತಿ: ವಿಜಯಪುರದಲ್ಲಿ ಸೀಲ್ ಡೌನ್ ಪ್ರದೇಶಗಳಿಗೆ ಸ್ಯಾನಿಟೈಸರ್ ಸಿಂಪಡಣೆ - ಕೊರೊನಾ ಲೆಟೆಸ್ಟ್ ನ್ಯೂಸ್
ಕೊರೊನಾ ವೈರಸ್ ಹರಡದಂತೆ ತಡೆಯಲು ಲಾಕ್ಡೌನ್ ಜಾರಿಯಲ್ಲಿದೆ. ಇನ್ನು ವಿಜಯಪುರದಲ್ಲಿ 6 ಪಾಸಿಟಿವ್ ಪ್ರಕರಣ ಪತ್ತೆಯಾದ ಹಿನ್ನೆಲೆ ಜಿಲ್ಲಾಡಳಿತ ಮುಂಜಾಗೃತಾ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ.
ವೈರಸ್ ಹರಡದಂತೆ ತಡೆಯಲು ಜಿಲ್ಲಾಡಳಿತ ಬೆಳಗ್ಗೆಯಿಂದಲೂ ನಗರದ ಗೋಳಗುಮ್ಮಟ ರಸ್ತೆ, ಚಪ್ಪರಬಂದ್ ಕಾಲೋನಿ, ಹರಣ ಶಿಕಾರಿಗಲ್ಲಿ ಸೇರಿಂದ ವಿವಿಧ ಭಾಗಗಳಲ್ಲಿ ಸ್ಯಾನಿಟೈಸರ್ ಸಿಂಪಡಣೆ ಮಾಡಿದರು.
ಕರೊನಾ ಪಾಸಿಟಿವ್ ಕಂಡುಬಂದ ಹಕ್ಕೀಮ್ ಚೌಕ್, ಕಾಮತ್ ಹೋಟೆಲ್, ಹರಣಶಿಕಾರಿ ಓಣಿ, ಗೋಳಗುಮ್ಮಟ ರಸ್ತೆ ಸೇರಿದಂತೆ ಹಲವು ಭಾಗಗಳಲ್ಲಿ ಅಗ್ನಿಶಾಮಕ ದಳದಿಂದ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗುತ್ತಿದೆ. ಇತ್ತ ಸೀಲ್ ಡೌನ್ ಆಗಿರುವ ಏರಿಯಾಗಳಲ್ಲಿ ಒಳ ರಸ್ತೆಗಳಿಗೂ ಕೂಡ ಪೊಲೀಸ್ ಇಲಾಖೆಯಿಂದ ಬ್ಯಾರಿಕೇಡ್ ಹಾಕಲಾಗಿದ್ದು, ಕಂಟೈನ್ಮೆಂಟ್ ಮತ್ತು ಬಫರ್ ಝೋನ್ ಎಂದು ಜಿಲ್ಲಾಡಳಿತ ಘೋಷಣೆ ಮಾಡಿದೆ. ಇನ್ನು ಕೆಲ ಮನೆಗಳಗೆ ಕೂಡ ಸ್ಯಾನಿಟೈಸರ್ ಮಿಶ್ರಿತ ಔಷಧ ಸಿಂಪಡಣೆ ಮಾಡುವ ಮೂಲಕ ಜಿಲ್ಲಾಡಳಿತ ಸೋಂಕು ನಿಯಂತ್ರಣ ಕ್ರಮಕ್ಕೆ ಮುಂದಾಗಿದೆ.