ಕರ್ನಾಟಕ

karnataka

ETV Bharat / state

ಕೊರೊನಾ ಮುಂಜಾಗ್ರತೆ: ವಿಜಯಪುರದಲ್ಲಿ ಸಿಲಿಂಡರ್​​​ಗಳಿಗೂ ಸ್ಯಾನಿಟೈಸರ್​ ದ್ರವ ಸಿಂಪಡಣೆ! - Sanitizer liquid sprayer for cylinders in Vijayapura

ಹೆಚ್‌ಪಿ ಅಡುಗೆ ಅನಿಲ ವಿತರಕರು ತಮ್ಮ ಸಿಬ್ಬಂದಿಗೆ ಹಾಗೂ ಗ್ರಾಹಕರಿಗೆ ಕೊರೊನಾ ವೈರಸ್ ತಾಗದಿರಲೆಂದು ಮುಂಜಾಗ್ರತಾ ಕ್ರಮವಾಗಿ ಸಿಲಿಂಡರ್​ಗಳನ್ನು ಗ್ರಾಹರಿಗೆ ತಲುಪಿಸುವ ಮುನ್ನ ಅವುಗಳಿಗೆ ಸ್ಯಾನಿಟೈಸರ್ ಸಿಂಪಡಣೆ ಮಾಡುತ್ತಿದ್ದಾರೆ.

corona updates in vijayapur
ಸಿಲಿಂಡರ್​​​ಗಳಿಗೆ ಸ್ಯಾನಿಟೈಸರ್ ದ್ರವ ಸಿಂಪಡಣೆ

By

Published : Apr 23, 2020, 7:22 PM IST

ವಿಜಯಪುರ: ಗ್ರಾಹಕರಿಗೆ ಕೊರೊನಾ ವೈರಸ್ ಹರಡದಿರಲೆಂದು ಅಡುಗೆ ಗ್ಯಾಸ್ ಸಿಲಿಂಡರ್‌ಗಳಿಗೆ ಸ್ಯಾನಿಟೈಸರ್ ಮಿಶ್ರಿತ ರಾಸಾಯನಿಕ ದ್ರವ ಸಿಂಪಡಣೆ ಮಾಡಿ ಗ್ರಾಹಕರ ಮನೆಗಳಿಗೆ ತಲುಪಿಸುವ ಕಾರ್ಯ ವೆಂಕಟೇಶ್ವರ ಹೆಚ್‌ಪಿ ಗ್ಯಾಸ್ ಏಜನ್ಸಿಯ ಸಿಬ್ಬಂದಿ ಮಾಡುತ್ತಿದ್ದಾರೆ.

ನಗರ ಸ್ಟೇಷನ್ ರಸ್ತೆಯಲ್ಲಿರುವ ಹೆಚ್‌ಪಿ ಅಡುಗೆ ಅನಿಲ ವಿತರಕರು ತಮ್ಮ ಸಿಬ್ಬಂದಿ ಹಾಗೂ ಗ್ರಾಹಕರಿಗೆ ಕೊರೊನಾ ವೈರಸ್ ತಾಗದಿರಲೆಂದು ಮುಂಜಾಗ್ರತಾ ಕ್ರಮವಾಗಿ ಸಿಲಿಂಡರ್​ಗಳನ್ನು ಗ್ರಾಹರಿಗೆ ತಲುಪಿಸುವ ಮುನ್ನ ಅವುಗಳಿಗೆ ಸ್ಯಾನಿಟೈಸರ್ ಸಿಂಪಡಣೆ ಮಾಡುತ್ತಿದ್ದಾರೆ. ಇನ್ನು ಪ್ರತಿದಿನ 200ಕ್ಕೂ ಅಧಿಕ ಸಿಲಿಂಡರ್‌ಗಳಿಗೆ ಸ್ಯಾನಿಟೈಸರ್ ಸಿಂಪಡಣೆ ಮಾಡುತ್ತಿದ್ದಾರೆ.

ಸಿಲಿಂಡರ್​​​ಗಳಿಗೆ ಸ್ಯಾನಿಟೈಸರ್ ಸಿಂಪಡಣೆ

ಬೆಳೆಗಳಿಗೆ ಔಷಧ ಸಿಂಪಡಣೆ ಮಾಡುವ ಯಂತ್ರದ ಮೂಲಕ ಸಿಲಿಂಡರ್​​ಗಳಿಗೆ ಸ್ಯಾನಿಟೈಸರ್ ಸಿಂಪಡಣೆ ಮಾಡಿಲಾಗುತ್ತಿದೆ. ಅಲ್ಲದೇ ಗ್ರಾಹಕರ ಮನೆಗಳಿಗೆ ಗ್ಯಾಸ್ ತೆಗೆದುಕೊಂಡ ಹೋದ ಮೇಲೆ ಕೂಡ ಸ್ಯಾನಿಟೈಸರ್ ಸಿಂಪಡಣೆ ಮಾಡಿ ಸಿಲಿಂಡರ್ ಕೊಡಲಾಗುತ್ತಿದೆ. ಸೀಲ್​​​​​ ಡೌನ್ ಪ್ರದೇಶಗಳಲ್ಲಿ ಬಳಕೆದಾರರು ಹೆಚ್ಚಾಗಿದ್ದಾರೆ. ಹೀಗಾಗಿ ಸ್ಯಾನಿಟೈಸರ್ ಸಿಂಪಡಣೆಗೆ ಮುಂದಾಗಿರೋದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ABOUT THE AUTHOR

...view details