ಕರ್ನಾಟಕ

karnataka

ETV Bharat / state

ರೌಡಿ ಶೀಟರ್ ಬಳಿ ಅಕ್ರಮ ಕಂಟ್ರಿ ಪಿಸ್ತೂಲ್ ಪತ್ತೆ.. - ಸ್ವರಕ್ಷಣೆಗಾಗಿ ಕಂಟ್ರಿ ಪಿಸ್ತೂಲ್

ಒಂದೇ ದಿನದಲ್ಲಿ ವಿವಿಧ ಪ್ರಕರಣಗಳನ್ನು ಭೇದಿಸಿರುವ ಪೊಲೀಸರು, ಮನೆ ಕಳ್ಳತನ, ಕೊಲೆ ಪ್ರಕರಣ, ಅಕ್ರಮ ಪಿಸ್ತೂಲ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 11 ಜನ ಆರೋಪಿಗಳನ್ನು ಬಂಧಿಸಿದ್ದಾರೆ.

Kn_vjp_
ರೌಡಿ ಶೀಟರ್ ಬಳಿ ಅಕ್ರಮ ಕಂಟ್ರಿ ಪಿಸ್ತೂಲ್ ಪತ್ತೆ

By

Published : Nov 11, 2022, 9:52 PM IST

ವಿಜಯಪುರ: ಜಿಲ್ಲೆಯಲ್ಲಿ‌ ರೌಡಿ ಶೀಟರ್​ನೊಬ್ಬ ತನ್ನ ಸ್ವಯಂ ರಕ್ಷಣೆಯ ನೆಪವೊಡ್ಡಿ ಅಕ್ರಮವಾಗಿ ಕಂಟ್ರಿ ಪಿಸ್ತೂಲ್ ಹಾಗೂ ಎರಡು ಗುಂಡು ಹೊಂದಿದ್ದು ಆತನನ್ನು ಸೇರಿ ಮೂವರನ್ನು ಆದರ್ಶನಗರ ಪೊಲೀಸರು ಬಂಧಿಸಿರುವ ಘಟನೆ ನಗರದಲ್ಲಿ ನಡೆದಿದೆ. ಕೂಲಿ‌ ಕೆಲಸ ಮಾಡಿಕೊಂಡಿದ್ದ ಜಿತೇಶ್​ ವಿಮಲಚಂದ ನಾಹರ್​, ಕಾಶಿಮಕೇರಿ ತಾಂಡಾದ ಗೋವಿಂದ ನಾಮದೇವ ರಾಠೋಡ ಹಾಗೂ ಗ್ಯಾಂಗಬಾವಡಿ ವಾಸಿ ಸತೀಶ್​ ಧನರಾಜ ನಾಯಕ ಬಂಧಿತ ಆರೋಪಿಗಳಾಗಿದ್ದಾರೆ.

ನಗರದ ಹುಂಡೇಕರ್ ಪೆಟ್ರೋಲ್ ಬಂಕ್ ಬಳಿ ಪೊಲೀಸರು ಕಂಟ್ರಿ ಪಿಸ್ತೂಲ್ ಸಮೇತ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ, ಆರೋಪಿ ಸತೀಶ್​ ಎಂಬವನು ತನ್ನ ಸ್ವರಕ್ಷಣೆಗಾಗಿ ಕಂಟ್ರಿ ಪಿಸ್ತೂಲ್ ಹೊಂದಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ.

ಸದ್ಯ ಬಂಧಿತ ಆರೋಪಿಗಳು ಎಲ್ಲಿಂದ ಕಂಟ್ರಿ ಪಿಸ್ತೂಲ್ ಹಾಗೂ ಗುಂಡು ಖರೀದಿಸಿದ್ದಾರೆ ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಂಧಿತ ಆರೋಪಿಗಳು ಕಳ್ಳತನ, ದರೋಡೆ ಸೇರಿದಂತೆ ವಿವಿಧ ಅಪರಾಧ ಕೃತ್ಯಕ್ಕೆ ಬಳಸಲು ಹೊರ ರಾಜ್ಯಗಳಿಂದ ಇಂಥ ಕಂಟ್ರಿ ಪಿಸ್ತೂಲ್​ಗಳನ್ನು ತರುತ್ತಿರುವುದು ಆತಂಕ ಮೂಡಿಸಿದೆ. ಸಾರ್ವಜನಿಕರು ಸಹ ಕಡಿಮೆ ಬೆಲೆಗೆ ಕಂಟ್ರಿ ಪಿಸ್ತೂಲ್ ಮಾರಾಟಕ್ಕೆ ಬಂದವರಿಂದ ಖರೀದಿಸಿದರೆ ಅಂಥವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಸ್ಪಿ ಆನಂದಕುಮಾರ ಎಚ್ಚರಿಕೆ ನೀಡಿದ್ದಾರೆ.

ಮನೆ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು: ಆದರ್ಶ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದ ಮನೆ ಕಳ್ಳತನ ಪ್ರಕರಣವನ್ನು ಭೇದಿಸಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಸಿಕಂದರ್​ ಸೈಯದ್, ಅಮೀರ್​ಖಾನ್​ ಪಠಾಣ ಹಾಗೂ ಅಬ್ದುಲ್ ರಹೀಮ್ ಶೇಖ್​ ಬಂಧಿತ ಆರೋಪಿಗಳು. ಆರೋಪಿಗಳಿಂದ 409 ಗ್ರಾಂ ಚಿನ್ನ, 1,145ಗ್ರಾಂ ಬೆಳ್ಳಿ, ಎರಡು ಬುಲೇರೋ, ಒಂದು ಕ್ರೂಜರ್ ವಾಹನ ಹಾಗೂ ಕಳ್ಳತನಕ್ಕೆ ಬಳಸಿದ್ದ ಒಂದು ಕಾರು ಸೇರಿ ಒಟ್ಟು 41,33,750ಲಕ್ಷ ರೂ. ಮೌಲ್ಯದ ವಸ್ತು ವಶ ಪಡಿಸಿಕೊಂಡಿದ್ದಾರೆ.

ರಹೀಮ್ ನಗರದಲ್ಲಿ ನಡೆದ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು:ಗಾಂಧಿಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯ ರಹೀಮ್ ನಗರದಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕುಮಾರ್​ ಲೇ ಔಟ್​ನ ಸಂತೋಷ ಲಾಳಸಂಗ ಹಾಗೂ ಗಾಂಧಿನಗರದ ರೋಹಿತ್ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಬಂಧಿತ ಆರೋಪಿಗಳಿಂದ 3, 27ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಇತr ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕೊಲೆ ಪ್ರಕರಣ:ಜಮೀನು ವಿಚಾರವಾಗಿ ಸಹೋದರ ಸಂಬಂಧಿಗಳ ಮಧ್ಯೆ ನಗರದ ಭೂತನಾಳ ಹೊಲದಲ್ಲಿ ನಡೆದ ಗಲಾಟೆಯಲ್ಲಿ ಸಂತೋಷ ಸದಾಶಿವ ಕಾಳೆ ಎಂಬುವವರ ಕೊಲೆಯಾಗಿದ್ದು, ಪ್ರಕರಣ ಭೇದಿಸಿದ ಆದರ್ಶನಗರ ಪೊಲೀಸರು, ಇಟ್ಟಂಗಿಹಾಳದ ತಂದೆ ಹಾಗೂ ಆತನ ಇಬ್ಬರು ಮಕ್ಕಳನ್ನು ಬಂಧಿಸಿದ್ದಾರೆ.‌ ತಂದೆ ದೂಳಪ್ಪ ಕಾಳೆ ಹಾಗೂ ಆತನ ಇಬ್ಬರು ಮಕ್ಕಳಾದ ವಿಠ್ಠಲ ಕಾಳೆ, ಅರ್ಜುನ ಕಾಳೆಯನ್ನು ಬಂಧಿಸಲಾಗಿದೆ.

ಇದನ್ನೂ ಓದಿ:ಗುರಾಯಿಸಿದ್ದಕ್ಕೆ ಲಾಂಗ್ ಬೀಸಿದ ಪುಂಡರು: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ABOUT THE AUTHOR

...view details