ವಿಜಯಪುರ:ಇಲ್ಲಿನ ಗಣೇಶನಗರದ ಸುತ್ತಮುತ್ತಲಿನ ಚಿನ್ನದಂಗಡಿ, ಸಿಮೆಂಟ್ ಅಂಗಡಿ, ಕಿರಾಣಿ ಸ್ಟೋರ್, ಹೇರ್ ಕಟ್ಟಿಂಗ್ ಹಾಗೂ ಬೇಕರಿ ಅಂಗಡಿಗಳ ಶೆಟರ್ ಮುರಿದು ಖದೀಮರು ಸರಣಿಗಳ್ಳತನ ಎಸಗಿದ್ದಾರೆ.
ಅಂಗಡಿಯೊಳಗೆ ನುಗ್ಗಲು ದೊಡ್ಡ ರಾಡ್ ಮೂಲಕ ಶೆಟರ್ ಮುರಿದು ಕಳ್ಳತನ ಮಾಡಲು ಯತ್ನಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದರ ಆಧಾರದ ಮೇಲೆ ಪೊಲೀಸರು ಆರೋಪಿಗಳ ಪತ್ತೆಗೆ ಜಾಲಬೀಸಿದ್ದಾರೆ.
ಕಾಮಗಾರಿಯೇ ಕಂಟಕ: ಇಬ್ರಾಹಿಂಪುರ ರೈಲ್ವೆ ಹಳಿಯ ಮೇಲೆ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವ ಕಾರಣ ಜಲನಗರದಿಂದ ಗಣೇಶನಗರಕ್ಕೆ ಸಂಪರ್ಕ ಹೊಂದಿರುವ ರಸ್ತೆ ಕಳೆದ ನಾಲ್ಕು ತಿಂಗಳಿಂದ ಬಂದ್ ಆಗಿದೆ. ಈ ಹಿನ್ನೆಲೆಯಲ್ಲು ರಾತ್ರಿ ಯಾವುದೇ ವಾಹನವಾಗಲಿ, ಬೈಕ್ಗಳು ಓಡಾಡುವುದಿಲ್ಲ. ರಾತ್ರಿ 10ಗಂಟೆಯಾದರೆ ಈ ರಸ್ತೆ ಸಂಪೂರ್ಣ ಸ್ತಬ್ಧವಾಗುವ ಕಾರಣ ಕಳ್ಳರಿಗೆ ಕಳ್ಳತನ ಮಾಡಲು ಅನುಕೂಲವಾದಂತಾಗಿದೆ.
ಸದ್ಯ ಸ್ಥಳಕ್ಕೆ ಜಲನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿದ್ದಾರೆ.