ಕರ್ನಾಟಕ

karnataka

ETV Bharat / state

ವಿಜಯಪುರದಲ್ಲಿ ಮಾಸ್ಕ್​ ಧರಿಸದೇ ಓಡಾಟ; ವಸೂಲಾದ ದಂಡ ಎಷ್ಟು ಗೊತ್ತಾ..?! - ವಿಜಯಪುರದಲ್ಲಿ ಮಾಸ್ಕ್ ಧರಿಸದೆ ಓಡಾಟ

ಕೊರೊನಾ ವೈರಸ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಮಾಸ್ಕ್ ಧರಿಸದೇ ಓಡಾಟ ನಡೆಸುವವರಿಗೆ ದಂಡ ಹಾಕುವಂತೆ ನಿರ್ದೇಶನ ನೀಡಿತು. ಆದಾಗ್ಯೂ ಮಾಸ್ಕ್ ಧರಿಸದೇ ಓಡಾಡಿದವರಿಂದ ಇದುವರಿಗೂ 5 ಲಕ್ಷ ರೂ. ದಂಡ ವಸೂಲಾಗಿದೆ‌ ಎಂದು ವಿಜಯಪುರ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Vijayapura
Vijayapura

By

Published : Oct 14, 2020, 11:01 AM IST

ವಿಜಯಪುರ: ಮಾಸ್ಕ್ ಧರಿಸದೇ ಓಡಾಡಿದವರಿಂದ ಇದುವರಿಗೂ 5 ಲಕ್ಷ ರೂ. ದಂಡ ವಸೂಲಾಗಿದೆ‌ ಎಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.

ಮಾಸ್ಕ್​ ಹಾಕದವರಿಗೆ ದಂಡ ವಿಧಿಸುತ್ತಿರುವ ಪೊಲೀಸರು

ಕೊರೊನಾ ವೈರಸ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಮಾಸ್ಕ್ ಧರಿಸದೇ ಓಡಾಟ ನಡೆಸುವವರಿಗೆ ದಂಡ ಹಾಕುವಂತೆ ನಿರ್ದೇಶನ ನೀಡಿತು. ಅಕ್ಟೋಬರ್ 1 ರಿಂದ 7 ರವರೆಗೂ ನಗರದ ಪ್ರದೇಶಲ್ಲಿ 1000 ರೂ. ಹಾಗೂ ಗ್ರಾಮೀಣ ಪ್ರದೇಶದಲ್ಲಿ 500 ರೂ. ದಂಡ ವಿಧಿಸಲಾಗಿತ್ತು. ಜಿಲ್ಲಾ ಪಂಚಾಯಿತಿ, ಪೊಲೀಸ್ ಇಲಾಖೆ ಹಾಗೂ ನಗರಾಭಿವೃದ್ಧಿ ಇಲಾಖೆಯಿಂದ 1195 ಕೇಸ್‌ಗಳ ಪೈಕಿ 3,94,200 ರೂ. ಜಿಲ್ಲಾಡಳಿತ ದಂಡ ವಸೂಲೂ ಮಾಡಿದೆ ಎಂದರು.

ಇನ್ನು ಸಾವಿರ ರೂ. ಮಾಸ್ಕ್ ದಂಡ ಹೊರೆಯಾಗುತ್ತಿದೆ ಎಂದು ಜನರು ಸರ್ಕಾರಕ್ಕೆ ಮನವಿ ಮಾಡಿದ ಮೇರೆಗೆ ಅಕ್ಟೋಬರ್‌ 8 ರಿಂದ ರಾಜ್ಯ ಸರ್ಕಾರ ನಗರ ಪ್ರದೇಶದಲ್ಲಿ 250 ಹಾಗೂ ಗ್ರಾಮೀಣ ಭಾಗದಲ್ಲಿ 100 ರೂ. ದಂಡ ಹಾಕುವಂತೆ ಆದೇಶ ಮಾಡಿದ ಬೆನ್ನಲ್ಲೇ ಅಕ್ಟೋಬರ್‌ 8 ರಿಂದ 13ರವರೆಗೂ 1,53,200 ರೂ. ದಂಡ ವಸೂಲಾಗಿದ್ದು. ಜಿಲ್ಲೆಯಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿ ಓಡಾಟ ನಡೆಸುವಂತೆ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಜಿಲ್ಲೆಯ ಜನತೆಗೆ ಮನವಿ ಮಾಡಿದ್ದಾರೆ.

ABOUT THE AUTHOR

...view details