ಕರ್ನಾಟಕ

karnataka

ಈಟಿವಿ ಭಾರತದ ವರದಿಗೆ ಎಚ್ಚೆತ್ತು ರಸ್ತೆ ದುರಸ್ಥಿಗೊಳಿಸಿದ ಅಧಿಕಾರಿಗಳು

By

Published : Oct 29, 2020, 2:40 PM IST

ಈಟಿವಿ ಭಾರತದ ವರದಿಗೆ ಎಚ್ಚೆತ್ತ ಅಧಿಕಾರಿಗಳು ರಸ್ತೆ ದುರಸ್ಥಿಗೊಳಿಸಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.

Road repaired by officers, Road repaired by officers in Vijayapura, Etv Bharat impact, Etv Bharat impact news, ರಸ್ತೆ ದುರಸ್ಥಿಗೊಳಿಸಿದ ಅಧಿಕಾರಿಗಳು, ವಿಜಯಪುರದಲ್ಲಿ ರಸ್ತೆ ದುರಸ್ಥಿಗೊಳಿಸಿದ ಅಧಿಕಾರಿಗಳು, ಈಟಿವಿ ಭಾರತ ಇಂಪ್ಯಾಕ್ಟ್​, ಈಟಿವಿ ಭಾರತ್​ ಇಂಪ್ಯಾಕ್ಟ್​ ಸುದ್ದಿ,
ಈಟಿವಿ ಭಾರತದ ವರದಿಗೆ ಎಚ್ಚೆತ್ತು ರಸ್ತೆ ದುರಸ್ಥಿಗೊಳಿಸಿದ ಅಧಿಕಾರಿಗಳು

ವಿಜಯಪುರ:ಹದಗೆಟ್ಟ ರಸ್ತೆಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಕುರಿತು ಈಟಿವಿ ಭಾರತದಲ್ಲಿ ವರದಿ ಬಿತ್ತರಿಸಲಾಗಿತ್ತು. ಇದರ ಬೆನ್ನಲ್ಲೇ ಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು ರಸ್ತೆ ಸುಧಾರಣೆ ಕ್ರಮಕ್ಕೆ ಮುಂದಾಗಿದ್ದಾರೆ.

ಈಟಿವಿ ಭಾರತದ ವರದಿಗೆ ಎಚ್ಚೆತ್ತು ರಸ್ತೆ ದುರಸ್ಥಿಗೊಳಿಸಿದ ಅಧಿಕಾರಿಗಳು

ಗುಮ್ಮಟನಗರಿಯ ರಸ್ತೆಗಳು ಹದಗೆಟ್ಟ ಪರಿಣಾಮ ನಿತ್ಯವೂ ವಾಹನ ಸವಾರರಿಗೆ ತಲೆನೋವಾಗಿತ್ತು. ಇತ್ತ ನಗರದಲ್ಲಿ ಸ್ವಲ್ಪ ಮಳೆ ಸುರಿದ್ರೆ ಸಾಕು ರಸ್ತೆಯಲ್ಲಿ ಮಳೆ ನೀರು ನಿಂತು ಸವಾರರು ಪರದಾಟ ಅನುಭವಿಸುತ್ತಿದ್ದರು.

ಈ ರಸ್ತೆಯಲ್ಲಿ ಬೈಕ್ ಸವಾರರು ಸ್ವಲ್ಪ ಯಾಮಾರಿದ್ರೂ ಸಾಕು ಪ್ರಾಣಾಪಾಯ ಕಟ್ಟಿಟ್ಟ ಬುತ್ತಿ. ರಸ್ತೆ ಸುಧಾರಣೆಗೆ ಮಹಾನಗರ ಪಾಲಿಕೆ ನಿರ್ಲಕ್ಷ್ಯ ತೋರುತ್ತಿದೆ. ಹೀಗಾಗಿ ಪ್ರವಾಸಿಗರು ಗುಮ್ಮಟನಗರಿಗೆ ಭೇಟಿ ನೀಡಲು ಹಿಂದೇಟು ಹಾಕುವ ವಾತಾವರಣ ನಿರ್ಮಾಣವಾಗಿದೆ ಎಂದು ಈಟಿವಿ ಭಾರತ ವರದಿ ಮಾಡಿತ್ತು.

ಈ ವರದಿ ಬಿತ್ತರಿಸಿದ ಬೆನ್ನಲ್ಲೇ ಮಹಾನಗರ ಪಾಲಿಕೆ ಅಧಿಕಾರಿಗಳು ಗೋಲಗುಮ್ಮಟ ಸಂಪರ್ಕ ಕಲ್ಪಿಸುವ ರಸ್ತೆಯ ಗುಂಡಿಗಳಿಗೆ ಮುಕ್ತಿ ನೀಡುವ ಕಾರ್ಯಕ್ಕೆ ಮುಂದಾಗಿದ್ದಾರೆ‌. ಹದಗೆಟ್ಟ ರಸ್ತೆಗೆ ತಾತ್ಕಾಲಿಕ ಗರ್ಸ್ ಹಾಕುವ ಮೂಲಕ ಗುಂಡಿ ಮುಚ್ಚುವ ಕಾರ್ಯ ಮಾಡುತ್ತಿದ್ದಾರೆ.

ABOUT THE AUTHOR

...view details