ವಿಜಯಪುರ: ರಸ್ತೆ ಬದಿ ನಿಂತಿದ್ದ ಕಬ್ಬು ತುಂಬಿದ ಟ್ರ್ಯಾಕ್ಟರ್ಗೆ ಹಿಂಬದಿಯಿಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ, ಬೈಕ್‌ನಲ್ಲಿದ್ದ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೊಲ್ಹಾರ ತಾಲೂಕಿನ ತೆಲಗಿ ಗ್ರಾಮದ ಬಳಿ ತಡರಾತ್ರಿ ನಡೆದಿದೆ.
ವಿಜಯಪುರ: ಟ್ರ್ಯಾಕ್ಟರ್ಗೆ ಹಿಂಬದಿಯಿಂದ ಬೈಕ್ ಡಿಕ್ಕಿ, ಇಬ್ಬರು ಸಾವು - ವಿಜಯಪುರದಲ್ಲಿ ರಸ್ತೆ ಅಪಘಾತ
ಕೊಲ್ಹಾರ ತಾಲೂಕಿನ ತೆಲಗಿ ಗ್ರಾಮದ ಬಳಿ ತಡರಾತ್ರಿ ರಸ್ತೆ ಬದಿ ನಿಂತಿದ್ದ ಕಬ್ಬು ತುಂಬಿದ ಟ್ರ್ಯಾಕ್ಟರ್ಗೆ ಹಿಂಬದಿಯಿಂದ ಬೈಕ್ ಡಿಕ್ಕಿ ಹೊಡೆದಿದ್ದು, ಬೈಕ್‌ನಲ್ಲಿದ್ದ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ವಿಜಯಪುರದಲ್ಲಿ ರಸ್ತೆ ಅಪಘಾತ
ಚೀರಲದಿನ್ನಿ ಗ್ರಾಮದ ಈರಣ್ಣ ವಾಲಿಕಾರ (22) ಹಾಗೂ ಸಿದ್ದನಗೌಡ ಜಮದಾರಖಾನಿ (20) ಸಾವನ್ನಪ್ಪಿದ್ದಾರೆ. ಮೃತ ಸವಾರರು ಕೂಡಗಿಯಿಂದ ಚಿರಲದಿನ್ನಿ ಗ್ರಾಮಕ್ಕೆ ಬರುವಾಗ ಈ ದುರ್ಘಟನೆ ಸಂಭವಿಸಿದೆ.
ಕೂಡಗಿ ಎನ್ಟಿಪಿಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.