ಕರ್ನಾಟಕ

karnataka

ETV Bharat / state

ವಿಜಯಪುರ: ಆಟೋಗೆ ಬಸ್ ಡಿಕ್ಕಿ, ವಿದ್ಯಾರ್ಥಿಗಳಿಗೆ ಗಾಯ - road accident in vijayapur

ಖಾಸಗಿ ಶಾಲಾ ಬಸ್ಸೊಂದು ಆಟೋ ಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ಕಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡ ಘಟನೆ ವಿಜಯಪುರದ ಮನಗೂಳಿ ಬೈಪಾಸ್ ಬಳಿ ನಡೆದಿದೆ.

ಆಟೋಗೆ ಬಸ್ ಡಿಕ್ಕಿ  : ಗಂಭೀರ ಗಾಯಗೊಂಡ ವಿದ್ಯಾರ್ಥಿಗಳು
ಆಟೋಗೆ ಬಸ್ ಡಿಕ್ಕಿ : ಗಂಭೀರ ಗಾಯಗೊಂಡ ವಿದ್ಯಾರ್ಥಿಗಳು

By

Published : Jun 20, 2022, 10:52 PM IST

ವಿಜಯಪುರ: ಖಾಸಗಿ ಶಾಲಾ ಬಸ್ಸೊಂದು ಆಟೋಗೆ ಡಿಕ್ಕಿ ಹೊಡೆದು ಹಲವು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ನಗರದ ಮನಗೂಳಿ ಬೈಪಾಸ್ ಬಳಿ ಸಂಜೆ ನಡೆದಿದೆ. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಆಟೋ ಪಲ್ಟಿಯಾಗಿದ್ದು, ಆಟೋದಲ್ಲಿದ್ದ ನಾಲ್ಕಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಗೊಂಡವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಸ್ ವಿಜಯಪುರದಿಂದ ಮನಗೂಳಿ ಮೂಲಕ ತಳೇವಾಡಕ್ಕೆ ಹೋಗುತ್ತಿತ್ತು. ವಿಜಯಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ:ಮಹಾರಾಷ್ಟ್ರ: ಎರಡು ಎಟಿಎಂ ಒಡೆದು 27 ಲಕ್ಷ ರೂ ದೋಚಿದ ಕಳ್ಳರು!

ABOUT THE AUTHOR

...view details