ವಿಜಯಪುರ: ಲಾರಿ ಹಾಗೂ ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ನಲ್ಲಿದ್ದ ಇಬ್ಬರು ಸವಾರರು ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಬರಟಗಿಯಲ್ಲಿ ನಡೆದಿದೆ. ಬರಟಗಿಯ ಎಲ್ಟಿ ಸರ್ಕಾರಿ ಮಾಧ್ಯಮಿಕ ಶಾಲೆಯ ಮುಖ್ಯ ಶಿಕ್ಷಕಕೆ ಎಚ್ ಹುದ್ದಾರ (58) ಹಾಗೂ ಸಹ ಶಿಕ್ಷಕ ಸಂಗನಗೌಡ ಪಾಟೀಲ್ ಮೃತರು ಎಂದು ಗುರುತಿಸಲಾಗಿದೆ.
ಲಾರಿ - ಬೈಕ್ ನಡುವೆ ಅಪಘಾತ: ಇಬ್ಬರು ಶಿಕ್ಷಕರು ಸ್ಥಳದಲ್ಲೇ ದುರ್ಮರಣ - ಲಾರಿ ಹಾಗೂ ಬೈಕ್ ಮಧ್ಯೆ ರಸ್ತೆ ಅಪಘಾತ ಇಬ್ಬರು ಶಿಕ್ಷಕರು ಸ್ಥಳದಲ್ಲೇ ಸಾವು
ನಗರದ ಹೊರ ಭಾಗದ ರಾಷ್ಟ್ರೀಯ ಹೆದ್ದಾರಿ-50 ರಲ್ಲಿ ಲಾರಿ ಹಾಗೂ ಬೈಕ್ ಮಧ್ಯೆ ರಸ್ತೆ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಇಬ್ಬರು ಶಿಕ್ಷಕರು ಸಾವನ್ನಪ್ಪಿದ್ದಾರೆ.
![ಲಾರಿ - ಬೈಕ್ ನಡುವೆ ಅಪಘಾತ: ಇಬ್ಬರು ಶಿಕ್ಷಕರು ಸ್ಥಳದಲ್ಲೇ ದುರ್ಮರಣ ಲಾರಿ ಹಾಗೂ ಬೈಕ್ ಮಧ್ಯೆ ರಸ್ತೆ ಅಪಘಾತ](https://etvbharatimages.akamaized.net/etvbharat/prod-images/768-512-12490271-thumbnail-3x2-abc.jpg)
ಲಾರಿ ಹಾಗೂ ಬೈಕ್ ಮಧ್ಯೆ ರಸ್ತೆ ಅಪಘಾತ
ನಗರದ ಹೊರ ಭಾಗದ ರಾಷ್ಟ್ರೀಯ ಹೆದ್ದಾರಿ-50 ರಲ್ಲಿ ಘಟನೆ ನಡೆದಿದೆ. ಅಪಘಾತದ ಬಳಿಕ ಲಾರಿ ಬಿಟ್ಟು ಲಾರಿ ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ಸಂಜಯ ಕಲ್ಲೂರು ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ತಾಕತ್ತಿದ್ದರೆ ನನ್ನ Voice Record ಬಿಡುಗಡೆ ಮಾಡ್ಲಿ; ಇಂದ್ರಜಿತ್ ಲಂಕೇಶ್ಗೆ ದರ್ಶನ್ ಸವಾಲು!